ADVERTISEMENT

ಕಲಬುರಗಿ: ನಾಗಾವಿ ಯಲ್ಲಮ್ಮ ದೇವಸ್ಥಾನ ಹುಂಡಿಯಲ್ಲಿ ಮಲೇಷ್ಯಾ ಕರೆನ್ಸಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:15 IST
Last Updated 22 ಫೆಬ್ರುವರಿ 2026, 0:15 IST
ಚಿತ್ತಾಪುರದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿದ್ದ ಮಲೇಷ್ಯಾ ಕರೆನ್ಸಿ
ಚಿತ್ತಾಪುರದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿದ್ದ ಮಲೇಷ್ಯಾ ಕರೆನ್ಸಿ   

ಚಿತ್ತಾಪುರ: ಪಟ್ಟಣದ ಹೊರವಲಯದ ನಾಗಾವಿಯ ಮುಜರಾಯಿ ಇಲಾಖೆಯ ಯಲ್ಲಮ್ಮ ದೇವಿ ದೇವ ಸ್ಥಾನದ ಹುಂಡಿ ತೆರೆದು ಹಣ ಎಣಿಸುವಾಗ ಮಲೇಷ್ಯಾ ದೇಶದ ಕರೆನ್ಸಿ ಪತ್ತೆಯಾಗಿದೆ.

ತಹಶೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಶನಿವಾರ ಹುಂಡಿ ಹಣ ಎಣಿಕೆ ಮಲೇಷ್ಯಾದ 18 ನೋಟು ಮತ್ತು 2 ನಾಣ್ಯಗಳು ದೊರೆತಿವೆ. ಒಂದು ರಿಂಗಿತ್‌ಗೆ ಭಾರತದ ₹23.26 ಪೈಸೆ ಮೌಲ್ಯವಾಗುತ್ತದೆ ಎಂದು ಹೇಳಿದ್ದಾರೆ.

ಹುಂಡಿಯಲ್ಲಿ ₹500 ಮುಖಬೆಲೆಯ 556 ನೋಟು, ₹200 ಮುಖಬೆಲೆಯ 455 ನೋಟು, ₹100 ಮುಖಬೆಲೆಯ 4,011 ನೋಟು, ₹50 ಮುಖಬೆಲೆಯ 5,012 ನೋಟು, ₹20 ಮುಖಬೆಲೆಯ 10,733 ನೋಟು, ₹10 ಮುಖಬೆಲೆಯ 14,480 ನೋಟು ಹಾಗೂ ₹5 ಮುಖಬೆಲೆಯ 9400 ನಾಣ್ಯ, ₹1ಯ 18,000 ನಾಣ್ಯಗಳು ಸೇರಿದಂತೆ ಒಟ್ಟು ₹14,73,160 ಹಣ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT
ಚಿತ್ತಾಪುರದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಶನಿವಾರ ಪತ್ತೆಯಾದ ಮಲೇಷಿಯಾದ ನಾಣ್ಯಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.