ಕಲಬುರಗಿ: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನವನ್ನು ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಮುಖಂಡರು ಮತ್ತು ಖರ್ಗೆ ಅವರ ಅಭಿಮಾನಿಗಳು ಭಾನುವಾರ ನಗರದ ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸಿದರು.
ಸಿದ್ದಿಬಾಷಾ ದರ್ಗಾ ಎದುರುಗಡೆ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಹಾಗೂ ಮದರ್ ತೆರೆಸಾ ಗ್ರಾಮೀಣ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಖರ್ಗೆ ಅವರ ಜನ್ಮದಿನದ ನಿಮಿತ್ತ ಬಡವರಿಗೆ ಅನ್ನ ದಾಸೋಹ ಜೊತೆಗೆ ಚಾದರ್‌ಗಳನ್ನು ವಿತರಿಸಲಾಯಿತು. ಕಾಂಗ್ರೆಸ್‌ನ ಅಫಜಲಪುರ ತಾಲ್ಲೂಕು ಮಹಿಳಾ ಕಾರ್ಯದರ್ಶಿ ಅನಸೂಯಾ ಸುಲೇಕರ್, ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಸಂಸ್ಥಾಪಕ ಅಧ್ಯಕ್ಷ ಎಸ್.ಎಸ್. ತಾವಡೆ, ಸತೀಶ ಹುಗ್ಗಿ, ರಾಕೇಶ ಮುಗಳಿ, ಪ್ರವೀಣ ಪುಣೆ ಹಾಜರಿದ್ದರು.
ಕನ್ನಡ ಭವನದಲ್ಲಿ ಸ್ಲಂ ಜನರ ಸಂಘಟನೆ ವತಿಯಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೋರಾಟಗಾರ ಡಿ.ಜಿ.ಸಾಗರ್ ಅವರ ಜನ್ಮದಿನದ ನಿಮಿತ್ತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ಶ್ರೀಧರ್ ಸಾರವಾಡ ಅವರು ಕೊಳಚೆ ಪ್ರದೇಶಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು. ಸಂಘಟನೆಯ ಗೌರವಾಧ್ಯಕ್ಷ ಬಾಬುರಾವ್ ದಂಡಿನಕರ್, ಅಲ್ಲಮಪ್ರಭು ನಿಂಬರ್ಗಾ, ಅನಿಲಕುಮಾರ ಚಕ್ರ, ಬ್ರಹ್ಮಾನಂದ ಮಿಂಚ್, ವಿಕಾಸ ಸವಾರಿಕರ್, ಹನುಮಂತ ನಿಂಬರ್ಗಾ, ಉದಯಕುಮಾರ ಡೆಪ್ಯೂಟಿ, ಅಂಬರೀಶ್ ಇಟಗಿಕರ್, ಗಣೇಶ್ ಕಾಂಬಳೆ, ಶಾಮರಾವ್ ಶಿಂದೆ ಇದ್ದರು.
ಮಹಾನಗರ ಪಾಲಿಕೆ ವಾರ್ಡ್ ನಂ.44ರ ಸದಸ್ಯ ಸಚಿನ್ ಶಿರವಾಳ ಅವರು ಶಾಂತಿನಗರ ಹಾಗೂ ವಿದ್ಯಾನಗರ ಬಡಾವಣೆಯಲ್ಲಿ 82 ಸಸಿಗಳನ್ನು ನೆಟ್ಟು, ಬಸ್ ನಿಲ್ದಾಣದ ಎದುರುಗಡೆ ಅನ್ನ ಸಂತರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಕಾಂಗ್ರೆಸ್ ಮುಖಂಡ ಅಭಿಷೇಕ್ ಪಾಟೀಲ, ಸಂಜೀವ್ ಐರೆಡ್ಡಿ, ಅಮರ್ ಶಿರವಾಳ, ಶರಣು ಬೆಳ್ಕೆರಿ, ರಹೀಮ್, ಹಾಜಿ, ಅಮ್ಜದ್, ರೋಷನ್ ಭಾಗವಹಿಸಿದ್ದರು.
ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಅಲ್ಲಮಪ್ರಭು ಪಾಟೀಲ ಅಭಿಮಾನಿ ಬಳಗದ ವತಿಯಿಂದ ಬಡವರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಪಕ್ಷದ ಮುಖಂಡರಾದ ಅಭಿಷೇಕ್ ಅಲ್ಲಮಪ್ರಭು ಪಾಟೀಲ, ಶೇಖ್ ಹುಸೇನ್, ಸಚಿನ್ ಶಿರವಾಳ, ಖಾಲಿದ್, ಕೆ.ಕೆ. ವೆಂಕಟೇಶ, ಅನುರಾಧಾ, ಸವಿತಾ, ನಾಗರೆಡ್ಡಿ, ರುಕುಂ ಪಟೇಲ್, ಗುರು ಕಲಶೆಟ್ಟಿ, ಪ್ರದೀಪ ಮೇಳಕುಂದಿ ಪಾಲ್ಗೊಂಡಿದ್ದರು.
ಬಿದ್ದಾಪುರ ಕಾಲೊನಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೊನಗುಂಟಿ ನೇತೃತ್ವದಲ್ಲಿ ನಿರ್ಗತಿಕರಿಗೆ ಅನ್ನದಾಸೋಹ ಮಾಡಲಾಯಿತು. ಪರಶುರಾಮ ನಾಟೀಕಾರ, ಅಮರ ಶಿರವಾಳ, ಅಶೋಕ ಕಪನೂರ, ಸೈಯದ ರಕಿಬ್, ಅಪ್ಪಾರಾವ ಪಟ್ಟಣ, ಮಹೇಶ, ಚಂದ್ರು, ಸಿದ್ದು, ವಿವೇಕ ಇದ್ದರು.
ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಪಿಲ್ಲೂ ಹೋಮಿ ಇರಾಣಿ ಮಹಿಳಾ ಮಹಾವಿದ್ಯಾಲಯ ವತಿಯಿಂದ ಖರ್ಗೆ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಕಮಲಾನಗರ ಶಿಕ್ಷಕ ಚಂದ್ರಶೇಖರ ಕಟ್ಟಿಮನಿ, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಪುಟ್ಟಮಣಿ ದೇವಿದಾಸ, ಕಾಲೇಜಿನ ಪ್ರಾಚಾರ್ಯೆ ಜ್ಯೋತಿ ಎಂ.ಸ್ವಾಮಿ, ಎಸ್.ಚಂದ್ರಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.