ಕಲಬುರಗಿ: ‘ಮೋದಿ–ಟ್ರಂಪ್ ಸ್ನೇಹಿತರಾಗಿರಬಹುದು. ಆದರೆ, ಮೋದಿ ದೇಶದ ಪಾಲಿನ ಶತ್ರುವಾದರು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಭಾನುವಾರ ನಗರದಲ್ಲಿ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರಿಗೆ ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಅಹಂಕಾರವಿದೆ’ ಎಂದು ಟೀಕಿಸಿದರು.
‘ಟ್ರಂಪ್ ಪರ ಮೋದಿ ಪ್ರಚಾರ ಮಾಡಿದರು. ಆದರೆ, ಟ್ರಂಪ್ ಸುಂಕಾಸ್ತ್ರದಿಂದ ದೇಶಕ್ಕೆ ತೊಂದರೆ ಆಯಿತು. ಹಿಂದಿನಂತೆಯೇ ಭಾರತ ಅಲಿಪ್ತ ನೀತಿ ಅನುಸರಿಸಿದ್ದರೆ ಅಮೆರಿಕದ ಸುಂಕಾಸ್ತ್ರ, ಚೀನಾದ ಅತಿಕ್ರಮಣ ಎದುರಿಸುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಜಿಎಸ್‌ಟಿ ಸ್ಲ್ಯಾಬ್ ಪರಿಷ್ಕರಣೆಯಿಂದ ಬಡವರಿಗೆ ಅನುಕೂಲ
ವಾಗಲಿದೆ. ಇದನ್ನು ಟೀಕಿಸುವುದಿಲ್ಲ. ಆದರೆ, ಜಿಎಸ್‌ಟಿ ಇಳಿಸುವಂತೆ ನಾವು ಎಂಟು ವರ್ಷಗಳ ಹಿಂದೆಯೇ ಹೇಳಿದ್ದೆವು. ಅವರು ನಿರ್ಲಕ್ಷ್ಯಿಸಿದ್ದರು. ಈಗ ದಿಢೀರ್ ಆಗಿ ಜಿಎಸ್‌ಟಿ ಯಾಕೆ ಪರಿಷ್ಕರಿಸುತ್ತಿದ್ದಾರೆ ಎಂಬುದು ಮೋದಿ ಅವರಿಗೇ ಗೊತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.