ADVERTISEMENT

ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 6:58 IST
Last Updated 8 ಸೆಪ್ಟೆಂಬರ್ 2020, 6:58 IST

ಚಿಂಚೋಳಿ: ನೆರೆಯ ತೆಲಂಗಾಣಕ್ಕೆ ಹೊಂದಿಕೊಂಡ ತಾಲ್ಲೂಕಿನ ಕಟ್ಟಕಡೆಯ ಸಂಗಾಪುರ ಗ್ರಾಮದಲ್ಲಿ ಸೋಮವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಕಬ್ಬು ಬೆಳೆಯಲ್ಲಿ ಬೆಳೆದಿದ್ದ ಗಾಂಜಾ ವಶಪಡಿಸಿಕೊಂಡರು.

ಗ್ರಾಮದ ಚಂದರ್ ರಾಠೋಡ್ ಎಂಬುವರು ತಮ್ಮ 20 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ₹ 3.5 ಲಕ್ಷ ಮೌಲ್ಯದ 88 ಕೆಜಿ ತೂಕದ ಹಸಿ ಮತ್ತು ಒಣಗಿದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದರ್ ರಾಠೋಡ್ ಅವರ ಪುತ್ರ ರಮೇಶ ರಾಠೋಡ್‌ಗೆ ಪೊಲೀಸರು ಬಂಧಿಸಿದ್ದಾರೆ.

ಡಿವೈಎಸ್ಪಿ ವೀರಭದ್ರಯ್ಯ, ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ, ಸುಲೇಪೇಟ ಸರ್ಕಲ‌್ ಇನ್‌ಸ್ಪೆಕ್ಟರ್ ವಿಜಯ ಮಹಾಂತೇಶ ಮಠಪತಿ, ಚಿಂಚೋಳಿ ಸಬ್ಇನ್‌ಸ್ಪೆಕ್ಟರ್ ರಾಜಶೇಖರ ರಾಠೋಡ್, ಮಿರಿಯಾಣ ಸಬ್ಇನ್‌ಸ್ಪೆಕ್ಟರ್ ಸಂತೋಷ ರಾಠೋಡ್, ಸುಲೇಪೇಟ ಸಬ್ಇನ್‌ಸ್ಪೆಕ್ಟರ್ ತಿಮ್ಮಯ್ಯ ಮತ್ತು ಕುಂಚಾವರಂ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಶಿವರಾಜ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ADVERTISEMENT

ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.