ಯಡ್ರಾಮಿ: ತಾಲ್ಲೂಕಿನ ಯತ್ನಾಳ ಗ್ರಾಮದ ಕುರಿಗಾಹಿ ತಮ್ಮಣ್ಣ ಭೀಮಪ್ಪ ಬಡಗೇರ (45) ಗುರುವಾರ ಬೆಳಿಗ್ಗೆ ಹಾವು ಕಚ್ಚಿ ಮೃತ್ತಪಟ್ಟಿದ್ದಾರೆ.
ತಮ್ಮಣ್ಣ ಅವರು ಕುರಿಗಳನ್ನು ಮೇಯಿಸಲು ಗ್ರಾಮದ ಪಕ್ಕದ ಹಳ್ಳದಲ್ಲಿ ಹೋದಾಗ ಬಲಗಾಲಿಗೆ ಹಾವು ಕಚ್ಚಿದೆ. ಆಗ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಮೀನಿಗೆ ತೆರಳಿದ್ದ ಜನರು ಮಲಗಿರುವ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ತಿಳಿದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ತಮ್ಮಣ್ಣ ಅವರಿಗೆ ಮೂವರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.
ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.