ADVERTISEMENT

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ- ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 5:53 IST
Last Updated 8 ಏಪ್ರಿಲ್ 2022, 5:53 IST
ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್‌ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌ ಗ್ರಾಮ ಸಭೆಯಲ್ಲಿ ಎಸ್ಪಿ ಇಶಾ ಪಂತ್‌ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು
ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್‌ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌ ಗ್ರಾಮ ಸಭೆಯಲ್ಲಿ ಎಸ್ಪಿ ಇಶಾ ಪಂತ್‌ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು   

ಕಮಲಾಪುರ: ‘ಮಧ್ಯಅಕ್ರಮ ಮಾರಾಟ, ಗಾಂಜಾ ಸೇವನೆ, ಮಾರಾಟ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಮಾಹಿತಿ ನೀಡಿ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕಡಿವಾಣ ಹಾಕಲಾಗವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ತಿಳಿಸಿದರು.

ತಾಲ್ಲೂಕಿನ ಕಿಣ್ಣಿ ಸಡಕ್‌ ಗ್ರಾಮದಲ್ಲಿ ಗುರುವಾರ ಆಯೋಜಸಿದ್ದ ‘ನಿಮ್ಮ ಮನೆ ಬಾಗಿಲಿಗೆ ಪೊಲೀಸ್‌’ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಶಾಲೆ ಆವರಣದಲ್ಲಿ ಮಧ್ಯ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದೆ. ಪಿಎಸ್‌ಐ ರೌಂಡ್ಸ್ ಹಾಕಲಿದ್ದಾರೆ. ಬೀಟ್ ಕಾನ್‌ಸ್ಸಟೆಲ್‌ಗೆ ಒಂದು ಸುತ್ತು ಹಾಕಲು ತಿಳಿಸಿದ್ದೇವೆ. ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್‌ಗಳನ್ನು ಹಾಕಲು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.

ADVERTISEMENT

ಡಿವೈಎಸ್‌ಪಿ ಶೀಲವಂತ ಹೊಸಮನಿ, ಸಿಪಿಐ ಶ್ರೀಮಂತ ಇಲ್ಲಾಳ, ಪಿಎಸ್‌ಐ ಭೀಮರಾಯ ‍ಪಾಟೀಲ, ಎಎಸ್‌ಐ ಜಯಲಿಂಗಪ್ಪ, ಅಂಬಿಕಾ ಗೌರೆ, ಅಶ್ವಿನಿ ರೆಡ್ಡಿ, ಕುಪೇಂದ್ರ ಶೆಟ್ಟಿ, ರಾಜಶೇಖರ ನಾಶಿ, ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಗೋರಂಪಳ್ಳಿ, ಉಪಾಧ್ಯಕ್ಷ ಶರಣಬಸಪ್ಪ ಮೂಲಗೆ, ಸದಸ್ಯ ವಿಜಯಕುಮಾರ ಮಾನೆ, ಕಿರಣ ಪಾಟೀಲ, ದಯಾನಂದ ಆರ್ಯ, ಗೋ‍ಪಾಲ ಮೇಲಕೇರಿ, ವಿಕಾಸ ಕಣಜಿ, ಶೃತಿ ಗೋರಂಪಳ್ಳಿ, ವಿಠಲ್‌ ಸಿಂಧೆ, ವಸಂತ ಪಾಟೀಲ, ದತ್ತು ಹೊಸಮನಿ, ಸಂಗಾರೆಡ್ಡಿ ಗೊಬ್ಬರವಾಡಿ, ಪಿಡಿಒ ಸಂಗೀತಾ ಬಿರಾದಾರ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.