ADVERTISEMENT

ಮರಾಠ ಅಭಿವೃದ್ಧಿ ಪ್ರಾಧಿಕಾರ: ಹರ್ಷ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 13:19 IST
Last Updated 20 ನವೆಂಬರ್ 2020, 13:19 IST
ಮುಖ್ಯಮಂತ್ರಿ ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದ್ದಕ್ಕೆ ಮರಾಠ ಸಮಾಜದ ಮುಖಂಡರು ಶಹಾಬಾದ್‌ನ ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು
ಮುಖ್ಯಮಂತ್ರಿ ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದ್ದಕ್ಕೆ ಮರಾಠ ಸಮಾಜದ ಮುಖಂಡರು ಶಹಾಬಾದ್‌ನ ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು   

ಶಹಾಬಾದ್‌: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮರಾಠ ಸಮಾಜದ ಮುಖಂಡರು ಇಲ್ಲಿನ ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕು ಮರಾಠ ಸಮಾಜದ ಅಧ್ಯಕ್ಷ ಶಂಕರ ಭಗಾಡೆ ಮಾತನಾಡಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವುದರಿಂದ ಮರಾಠ ಸಮಾಜದಲ್ಲಿ ಹಿಂದುಳಿದವರಿಗೆ ಬಹಳ ಅನುಕೂಲವಾಗಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಸಧಿಸಲು ಸಹಾಯವಾಗುತ್ತದೆ ಎಂದರು.

ನಗರ ಘಟಕದ ಅಧ್ಯಕ್ಷ ದತ್ತಾ ಶಿಂಧೆ, ಗೌರವಾಧ್ಯಕ್ಷ ಜ್ಞಾನೇಶ್ವರ ನನ್ನಾವರೆ, ಬಿಜೆಪಿ ಮುಖಂಡರಾದ ಅನೀಲ ಬೋರಗಾಂವಕರ್, ನಿಂಗಣ್ಣ ಹುಳಗೋಳಕರ್, ಸದಾನಂದ ಕುಂಬಾರ, ಕನಕಪ್ಪ ದಂಡಗುಲಕರ್, ಭೀಮಯ್ಯ ಗುತ್ತೇತೆದಾರ, ಮರಾಠ ಸಮಾಜದ ಮುಖಂಡರಾದ ಚಂದ್ರಕಾಂತ ಸೂರ್ಯವಂಶಿ, ಪವನಕುಮಾರ ಜಾಧವ, ಅವಿನಾಶ ಸಾಳುಂಕೆ, ರಮೇಶ ಪವಾರ, ವಿಷ್ಣು ಸೂರ್ಯವಂಶಿ, ಅಶೋಕ, ಶಿವರಾಜ ಪವಾರ, ಪ್ರಭಾಕರ ಮಾನೆ, ಅಶೋಕ ಶಿಂಧೆ, ಸತೀಶ ಭಗಾಡೆ, ಬಾಬಾಸಾಹೇಬ ಸಾಳುಂಕೆ, ಶೋಮಶೇಖರ ಶಿಂಧೆ, ಶಿವಕುಮಾರ ಭಗಾಡೆ, ಡಾ.ಕಿಶನ್ ಜಾಧವ, ಲಕ್ಷ್ಮಣ ಜಾಧವ, ಸಂತೋಷ ಸಾವಂಥ, ಚಂದ್ರಕಾಂತ ಜಗತಪ, ಮುಖೇಶ ಮಾಂಗ, ರಾಮು ಶಿಂಧೆ, ದಶರಥ ಜಗತಪ, ಅಶೋಕ ಜಿಂಗಾಡೆ, ಬಸವರಾಜ ಬಿರಾದಾರ, ಭೀಮರಾವ ಸಾಳುಂಕೆ, ಉಮಾಕಾಂತ ಸೂರ್ಯವಂಶಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.