ಕಲಬುರಗಿ: ‘ಬಾಬು ಜಗಜೀವನರಾಂ ಅವರ 118ನೇ, ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಹಾಗೂ ಜಗಜ್ಯೋತಿ ಬಸವೇಶ್ವರ 892ನೇ ಜಯಂತ್ಯುತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಮಾದಿಗ ಸಮಾಜದಿಂದ ಮೇ 28ರಂದು 21 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಸಮಾಜದ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ.ನಾಟಿಕಾರ ಹೇಳಿದರು.
‘ಸಾಮೂಹಿಕ ವಿವಾಹ ಸಮಾರಂಭಕ್ಕೆ ಈಗಾಗಲೇ 8 ಜೋಡಿಗಳು ನೋಂದಣಿ ಮಾಡಿಕೊಂಡಿವೆ. ವಧು–ವರರಿಗೆ ಬಟ್ಟೆ, ಕಾಲುಂಗರ, ತಾಳಿ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಮಾದಿಗ ಸಮಾಜ ಬಾಂಧವರು ಸಾಮೂಹಿಕ ವಿವಾಹದ ಪ್ರಯೋಜನ ಪಡೆಯಬೇಕು. ಮಾಹಿತಿಗೆ ಮೊ. 99454 16439/ 72594 19666ಕ್ಕೆ ಸಂಪರ್ಕಿಸಬಹುದು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಗೌರವಾಧ್ಯಕ್ಷ ರಾಮಚಂದ್ರ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಸೈಬಣ್ಣ ಚಂದನ್, ಕಾರ್ಯಾಧ್ಯಕ್ಷ ಶಿವಾನಂದ ಸಾವಳಗಿ, ಮಲ್ಲಪ್ಪ ಮಾದರ, ಜಾನಪ್ಪ ಶಿವನೂರ, ಸುಂದರ ಸಾಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.