
ಚಿಂಚೋಳಿ: ತಾಲ್ಲೂಕಿನ ನಾಗಾಈದಲಾಯಿ ಮತ್ತು ತಿರುಮಲಾಪುರ ಗ್ರಾಮದ ವತಿಯಿಂದ ಪಟಪಳ್ಳಿಯ ಚಂಡ್ರಾಸಿ ಕ್ರಿಕೆಟ್ ಮೈದಾನದಲ್ಲಿ ಈರಮ್ಮ ಗುರುಲಿಂಗಪ್ಪ ಕೇಶ್ವಾರ ಸ್ಮರಣಾರ್ಥ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಬೀದರ್ ಜಿಲ್ಲೆಯ ಮೀನಕೇರಾ ತಂಡ ಕಲಬುರಗಿ ಜಿಲ್ಲೆಯ ಶಿಕಾರ ಮೋತಕಪಳ್ಳಿ ತಂಡವನ್ನು ಮಣಸಿ ನಗದು ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡು ಮಿನುಗಿತು.
ತಿರುಮಲಾಪುರ ಹೊರವಲಯದಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ 52 ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯ ಶಿಕಾರ ಮೋತಕಪಳ್ಳಿ ಹಾಗೂ ಮೀನಕೇರಾ ತಂಡಗಳ ನಡುವೆ ನಡೆಯಿತು. ಶಿಕಾರ ಮೋತಕಪಳ್ಳಿ ತಂಡ 10 ಓವರಗಳಲ್ಲಿ 5 ವಿಕೆಟ್ ಕಳೆದುಕೊಂಡು 73 ರನಕಲೆ ಹಾಕುವ ಮೂಲಕ ಎದುರಾಳಿ ಮೀನಕೇರಾ ತಂಡಕ್ಕೆ 74 ರನಗಳ ಗೆಲುವಿನ ಗುರಿ ನೀಡಿತು.
ಗುರಿ ಬೆನ್ನಟ್ಟಿದ ಮೀನಕೇರಾ ತಂಡ 6 ಓವರಗಳಲ್ಲಿ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಪ್ರಥಮ ಬಹುಮಾನ ನಗದು ₹30 ಸಾವಿರ ಮತ್ತು ಟ್ರೋಫಿಯನ್ನು ನಿವೃತ್ತ ಎಇಇ ಶಿವಶರಣಪ್ಪ ಕೇಶ್ವಾರ, ಸಿದ್ದರಾಜ ಕೇಶ್ವಾರ ವಿತರಿಸಿದರು.
ದ್ವಿತೀಯ ಬಹುಮಾನವನ್ನು ದ್ವಿತೀಯ ಬಹುಮಾನ ಶಿಕಾರ ಮೋತಕಪಳ್ಳಿ ತಂಡವು ₹15 ಸಾವಿರ ನಗದು ಮತ್ತು ಟ್ರೋಪಿಯನ್ನು ಚನ್ನಶೆಟ್ಟಿ ಪಾಟೀಲ ವಿತರಿಸಿದರು. ಟೂರ್ನಿ ಒಂದು ತಿಂಗಳು ಕಾಲ ನಡೆಯಿತು. ಪ್ರವೀಣ ಮೀನಕೇರಾ ಪಂದ್ಯ ಪುರುಷ, ಸತೀಶ ಮೀನಕೇರಾ ಸರಣಿ ಪುರುಷ, ಉತ್ತಮ ಬಾಲರ್ ಪ್ರಶಾಂತ ಮೀನಕೇರಾಗೌರವಕ್ಕೆ ಪಾತ್ರರಾದರು. ಇವರಿಗೆ ಬಹುಮಾನ ಭೀಮಯ್ಯ ಗುತ್ತೇದಾರ ವಿತರಿಸಿದರು.
ನೆಲ್ಲಿ ಮಲ್ಲಿಕಾರ್ಜುನ, ಸಂಜೀವ ತಿರುಮಲಾಪುರ, ಕಿರಣ ನಾಯಕ ಟೂರ್ನಿ ಆಯೋಜಿಸಿದ್ದರು. ಬಹುಮಾನ ವಿತರಣೆಯಲ್ಲಿ ವೀರಾರೆಡ್ಡಿ ಅನಂತರೆಡ್ಡಿ, ಶಶಿಕಾಂತ ಪಾಟೀಲ, ಮಹಿಬೂಬ ಅಲಿ, ಶಿವಶರಣಪ್ಪ ಸೂಗೂರು, ಆಕಾಶ ಕೊಳ್ಳೂರು, ಉದಯ ಸಿಂಧೋಲ, ರಾಜು ನಾಯಕ, ಸತೀಶ ನಾಯಕ, ಶಿವಕುಮಾರ ಕೋರಿ, ಮಾರುತಿ ಚಂಡ್ರಾಸಿ, ಪ್ರಭು, ಆನಂದರೆಡ್ಡಿ, ಜಗನ್ನಾಥ, ರವೀಂದ್ರ, ಈರಪ್ಪ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.