ADVERTISEMENT

ಮಿನಿ ಒಲಿಂಪಿಕ್: ಜುಡೋದಲ್ಲಿ 8 ಪದಕ

​ಪ್ರಜಾವಾಣಿ ವಾರ್ತೆ
Published 23 ಮೇ 2022, 3:59 IST
Last Updated 23 ಮೇ 2022, 3:59 IST
ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕದ ಎರಡನೇ ‘ಮಿನಿ ಒಲಿಂಪಿಕ್–2022’ ಕ್ರೀಡಾಕೂಟದ ಜುಡೋ ಕ್ರೀಡೆಯಲ್ಲಿ ಜಿಲ್ಲೆಯ ವಿವಿಧ ಪದಕ ಪಡೆದ ಕ್ರೀಡಾಪಟುಗಳೊಂದಿಗೆ ತರಬೇತುದಾರರಾದ ಶ್ರೀಲೇಖ, ಅಶೋಕ ಇದ್ದಾರೆ
ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕದ ಎರಡನೇ ‘ಮಿನಿ ಒಲಿಂಪಿಕ್–2022’ ಕ್ರೀಡಾಕೂಟದ ಜುಡೋ ಕ್ರೀಡೆಯಲ್ಲಿ ಜಿಲ್ಲೆಯ ವಿವಿಧ ಪದಕ ಪಡೆದ ಕ್ರೀಡಾಪಟುಗಳೊಂದಿಗೆ ತರಬೇತುದಾರರಾದ ಶ್ರೀಲೇಖ, ಅಶೋಕ ಇದ್ದಾರೆ   

ಕಲಬುರಗಿ: ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕದ ಎರಡನೇ ‘ಮಿನಿ ಒಲಿಂಪಿಕ್–2022’ ಕ್ರೀಡಾಕೂಟದ ಜುಡೋ ಕ್ರೀಡೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿ, ವಿವಿಧ ಪದಕಗಳನ್ನು ಪಡೆದಿದ್ದಾರೆ.

ಸಾಯಿನಾಥ್ ಮೈಪಾಲ್ 50 ಕೆ.ಜಿ ವಿಭಾಗದಲ್ಲಿ ಮೊದಲ ಸ್ಥಾನ.ಆಶಿಶ್ ಧನರಾಜ್ 55 ಕೆ.ಜಿ ಭಾಗದಲ್ಲಿ ಮೊದಲ ಸ್ಥಾನ. ಸಿದ್ಧಾರ್ಥ ಕಾಶಿನಾಥ 35 ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನ. ವೇದಾಂತ ಕಾಶಿನಾಥ 30 ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನ. ಅನಾಮಿಕ ರವಿ 36 ಕೆ.ಜಿ ಭಾಗದಲ್ಲಿ ಎರಡನೇ ಸ್ಥಾನ. ಹ್ಯಾಪಿರಾಜ್‌ ಸಿದ್ದರಾಜು 55 ಕೆ.ಜಿ ವಿಭಾಗದಲ್ಲಿ ಮೂರನೇ ಸ್ಥಾನ. ಶ್ರಾವಂತಿ 28 ಕೆ.ಜಿ ವಿಭಾಗದಲ್ಲಿ ಮೊದಲ ಸ್ಥಾನ. ಶೌರ್ಯ 60 ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.ನಿಧಿ ಕುಲಕರ್ಣಿ, ಚಿತ್ರಲೇಖ, ಸ್ಪಂದನ, ರುದ್ರಾಕ್ಷ, ಆದಿತ್ಯ ಕೂಡ ವಿವಿಧ ತೂಕದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಜುಡೋಗೆ ಆಯ್ಕೆಯಾದ ರಾಜ್ಯದ ಎಂಟು ಜಿಲ್ಲೆಗಳ ಕ್ರೀಡಾಪಟುಗಳೊಂದಿಗೆ ಸೆಣಸಾಡಿ ಹೆಚ್ಚಿನ ಪದಗಳನ್ನು ಗೆದ್ದಿದ್ದಾರೆ. ಈಸಾಧನೆಗೆ ತರಬೇತುದಾರರಾದ ಅಶೋಕ ಎಂ., ಶ್ರೀಲೇಖ, ಜಿಲ್ಲಾ ಜುಡೋ ಸಂಘದ ಮುಖಂಡ ಶಿವಂ ಜೋಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.