ಕಲಬುರಗಿ: ನಗರದ ವಾರ್ಡ್ ನಂಬರ್ 52ರ ಅಕ್ಕಮಹಾದೇವಿ ಕಾಲೊನಿಯ ಬೆಥನಿ ಕಾನ್ವೆಂಟ್ ಶಾಲೆಯ ಎದುರುಗಡೆ ₹20 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಹಾಗೂ ವರದಾ ನಗರ, ವೀರಭದ್ರೇಶ್ವರ ಕಾಲೊನಿಯಲ್ಲಿ ಹೊಸ ಬೋರ್‌ವೆಲ್ ಅನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.
ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ ಹೇರೂರ, ಬೆಥನಿ ಕಾನ್ವೆಂಟ್ ಶಾಲೆಯ ಮುಖ್ಯೋಪಾಧ್ಯಾಯ ಫಿಲೋಮಿನಾ ಸಲ್ದಾನಾ, ಸಿಸ್ಟರ್ ಜೋಸ್ಟಿನ್, ಸಿಸ್ಟರ್ ಎಲಿವಿನ್, ಮುಖಂಡರಾದ ಪ್ರಶಾಂತ ಗಡಿಮಠ, ರೇವಣಸಿದ್ದಯ್ಯ ಮಠ, ಋಷಿಕೇಶ ದೇಶಮುಖ, ಅನಿರುದ್ಧ ದೇಶಮುಖ, ರಮೇಶ್ ಗಡಗಿ, ಸಂಜುಕುಮಾರ, ಸುಭಾಶ ಡೆಂಕಿ, ವಿನೋದ ಪಾಟೀಲ, ರವಿ ಪಾಟೀಲ, ಹಣಮಂತ ರೆಡ್ಡಿ, ಸಾಗರ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.