
ಪ್ರಜಾವಾಣಿ ವಾರ್ತೆ
ಮುಖ್ಯಮಂತ್ರಿ ನಾಟಕ ಪ್ರದರ್ಶನ
ಕಲಬುರಗಿ: ನಗರದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿರುವ ‘ಕಲಬುರಗಿ ನಾಟಕೋತ್ಸವ’ ಅಂಗವಾಗಿ ಇದೇ 23ರಂದು ಸಂಜೆ 7 ಗಂಟೆಗೆ 'ಮುಖ್ಯಮಂತ್ರಿ' ನಾಟಕ ಪ್ರದರ್ಶನಗೊಳ್ಳಲಿದೆ.
ಮುಖ್ಯಮಂತ್ರಿ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಅಭಿನಯಿಸುವರು. ಇದು ನಾಟಕದ 886ನೇ ಪ್ರಯೋಗ. ಬೆಂಗಳೂರಿನ ಕಲಾಗಂಗೋತ್ರಿ ತಂಡವು ಕಳೆದ 45 ವರ್ಷಗಳಿಂದ ಅಧಿಕ ಮುಖ್ಯಮಂತ್ರಿ ನಾಟಕ ಪ್ರದರ್ಶಿಸುತ್ತಿದೆ. ರಣಜಿತ್ ಕಪೂರ್ ಅವರ ಹಿಂದಿ ಮೂಲದ ನಾಟಕವನ್ನು ಟಿ.ಎಸ್.ಲೋಹಿತಾಶ್ವ ಕನ್ನಡಕ್ಕೆ ತಂದಿದ್ದು, ಬಿ.ವಿ.ರಾಜಾರಾಂ ನಿರ್ದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.