ಎಫ್‌ಐಆರ್
ಕಲಬುರಗಿ: ಆಳಂದ ತಾಲ್ಲೂಕಿನ ಪಡಸಾವಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಶ್ವನಾಥ ಕಲ್ಯಾಣಿ ಜಮಾದಾರ ಕೊಲೆ ಆರೋಪದಲ್ಲಿ ಪಿಡಿಒ ದಶರಥ ಪಾತ್ರೆ ಹಾಗೂ ಹಿತ್ತಲಶಿರೂರ ನಿವಾಸಿ ಲಕ್ಷ್ಮಣ್ಣ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವನಾಥ ಅವರನ್ನು ಖಾನಾಪುರ ಕ್ರಾಸ್ ಸಮೀಪದ ಆಳಂದ–ವಾಗ್ದರಿ ಮುಖ್ಯರಸ್ತೆ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಕೆಲಸದ ಸಂಬಂಧ ಪಿಡಿಒ ದಶರಥ ಪಾತ್ರೆ ಮತ್ತು ವಿಶ್ವನಾಥ ನಡುವೆ ವೈರತ್ವ ಬೆಳೆದಿತ್ತು. ವಿಶ್ವನಾಥ ಜತೆಗೆ ದಶರಥ ತಕರಾರು ಮಾಡುತ್ತಿದ್ದರು ಎಂದು ಆರೋಪಿ ವಿಶ್ವನಾಥ ಪತ್ನಿ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.