ADVERTISEMENT

ಅಫಜಲಪುರ: ಮುಸ್ಲಿಂ ಸಮಾಜದವರಿಗೆ ಇಫ್ತಿಯಾರ್ ಕೂಟ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 2:52 IST
Last Updated 15 ಏಪ್ರಿಲ್ 2022, 2:52 IST
ಅಫಜಲಪುರ ಪಟ್ಟಣದ ಮಣ್ಣೂರ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಜೆ.ಎಂ. ಕೊರಬು ಫೌಂಡೇಶನ್ ವತಿಯಿಂದ ನಡೆದ ಇಫ್ತಿಯಾರ್ ಕೂಟ
ಅಫಜಲಪುರ ಪಟ್ಟಣದ ಮಣ್ಣೂರ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಜೆ.ಎಂ. ಕೊರಬು ಫೌಂಡೇಶನ್ ವತಿಯಿಂದ ನಡೆದ ಇಫ್ತಿಯಾರ್ ಕೂಟ   

ಅಫಜಲಪುರ: ರಂಜಾನ್‌ ತಿಂಗಳು ಮುಸ್ಲಿಂ ಬಾಂಧವರಿಗೆ ಪವಿತ್ರವಾಗಿದ್ದು ಅಲ್ಲಾಹನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವ ಮಾರ್ಗವಾಗಿದೆ ಹಾಗೂ ನಾವು ಜೀವನದಲ್ಲಿ ಮಾಡಿದ ಪಾಪವನ್ನು ಈ ತಿಂಗಳಿನಲ್ಲಿ ಸ್ವಲ್ಪವಾದರೂ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಪಾಪವನ್ನು ತೊಳೆದುಕೊಳ್ಳಬಹುದು ಎಂದು ಸಮಾಜ ಸೇವಕ ಜೆ.ಎಂ.ಕೊರಬು ತಿಳಿಸಿದರು.

ಪಟ್ಟಣದ ಮಣ್ಣೂರ ಫಂಕ್ಷನ್ ಹಾಲ್ ನಲ್ಲಿ ಬುಧವಾರ ಜೆ.ಎಂ.ಕೊರಬು ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಇಫ್ತಿಯಾರ್‌ ಕೂಟದಲ್ಲಿ ಮಾತನಾಡಿದರು.

ಮಕ್ಬೂಲ್ ಪಟೇಲ್ ಮಾತನಾಡಿ, ಸಮಾಜ ಸೇವಕ ಜೆ.ಎಂ.ಕೊರಬು ಯಾವತ್ತೂ ಸಹ ನಮ್ಮ ಮುಸ್ಲಿಂ ಸಮುದಾಯದ ಮೇಲೆ ಅತ್ಯಂತ ಪ್ರೀತಿ ಇಟ್ಟುಕೊಂಡಿರುವ ಸರಳ ಜೀವಿ ಆಗಿದ್ದಾರೆ. ಇವತ್ತು ಅಫಜಲಪುರ ಪಟ್ಟಣದಲ್ಲಿ ಇಫ್ತೀಯಾರ್ ಕೂಟ ಏರ್ಪಡಿಸಿದ್ದು ಶ್ಲಾಘನೀಯವಾಗಿದೆ ತಿಳಿಸಿದರು.

ADVERTISEMENT

ಮಂಜೂರ ಪಟೇಲ್, ಮಹಾಂತೇಶ್ ಪಾಟೀಲ್,ಶಿವಪುತ್ರಪ್ಪ ಜಿಡ್ಡಗಿ, ಜಾಫರ ಪಟೇಲ್, ಮೂನೀರ ಪಟೇಲ್, ಕಲೀಮ್ ಪಟೇಲ್, ಕುಪೇಂದ್ರ ಭಾಸಗಿ, ಜಕ್ಕಪ್ಪ ಪುಜಾರಿ, ಮಕ್ಬೂಲ್ ಪಟೇಲ್ ಮಾಶಾಳ, ಭಾಷಾ ಕರಜಗಿ ಇದ್ದರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.