ADVERTISEMENT

ಪ್ರಿಯಾಂಕ್ ಖರ್ಗೆ ಕ್ರಿಯೆಗೆ ನಮ್ಮವರ ಪ್ರತಿಕ್ರಿಯೆ; ಎನ್‌ ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:28 IST
Last Updated 14 ನವೆಂಬರ್ 2022, 5:28 IST
ಎನ್‌.ರವಿಕುಮಾರ್‌
ಎನ್‌.ರವಿಕುಮಾರ್‌   

ಕಲಬುರಗಿ: ‘ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾತನಾಡುವಾಗ ನಿಮ್ಮನ್ನು ತಡೆಯುವ ಶಕ್ತಿ ನಮಗೆ ಇದ್ದು, ಕಾಂಗ್ರೆಸ್‌ನ ಇತಿಹಾಸ ಬೇರೆಯೇ ಇದೆ. ಎಷ್ಟೆಲ್ಲಾ ರಣಾಂಗಣ ಎದುರಿಸಿದ್ದೇವೆ. ತಾಳ್ಮೆ ಮೀರಿದರೆ ಬಿಜೆಪಿಯವರು ಓಡಾಡಲು ಆಗುವುದಿಲ್ಲ ಎಂದಿದ್ದಾರೆ. ಹೀಗಾಗಿ, ಅವರ ಕ್ರಿಯೆಗೆ ನಮ್ಮವರೂ ಪ್ರತಿಕ್ರಿಯೆ ಕೊಟ್ಟಿದ್ದಾರೆ’ ಎಂದುವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸ್ಪಷ್ಟನೆ ನೀಡಿದರು.

‘ನಮ್ಮ ಕಾರ್ಯಕರ್ತರು ಶೂಟ್ ಅಥವಾ ಬೇರೆ ಪದಗಳನ್ನು ಬಳಸಿದ್ದಾರೆ. ಅವರು ಮನಸ್ಸಿನಲ್ಲಿ ಯಾವ ಶೂಟ್ ಎಂಬುದು ಇತ್ತೋ ನನಗೆ ಗೊತ್ತಿಲ್ಲ. ಬೇರೆ ತರಹದ ಶೂಟ್ ಇರಬಹುದು. ಅವರ ಪ್ರತಿಕ್ರಿಯೆಗೆ ನಮ್ಮವರೂ ಉತ್ತರಿಸಿದ್ದಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಪ್ರಜಾಸತಾತ್ಮಕ ನೆಲೆಯಲ್ಲಿ ಎಲ್ಲರೂ ರಾಜಕೀಯ ಮಾಡಬೇಕು’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಿಯಾಂಕ್ ಅವರು ಸೋಲುವ ಹತಾಶೆಯಿಂದ ಮಾತನಾಡುವ ಬದಲು ತಮ್ಮ ತಂದೆಯಂತೆ ಮುತ್ಸದ್ದಿತನ ತೋರಬೇಕು. ಹಿಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಲು ಪ್ರಿಯಾಂಕ್ ಕಾರಣ. ಸ್ವಯಂಕೃತ ತಪ್ಪಿನಿಂದಲೇ ಪ್ರಿಯಾಂಕ್ ಸೋಲುವರು. ಅವರನ್ನು ಸೋಲಿಸುವುದೇ ನಮ್ಮ ಧ್ಯೇಯ’ ಎಂದರು. ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.