ADVERTISEMENT

ನಾಡ ಕಚೇರಿ ಸೇವೆ: ಕಲಬುರಗಿ ನಂ.1; ಫೌಜಿಯಾ ತರನ್ನುಮ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:22 IST
Last Updated 3 ಜನವರಿ 2026, 6:22 IST
<div class="paragraphs"><p>ಫೌಜಿಯಾ ತರನ್ನುಮ್</p></div>

ಫೌಜಿಯಾ ತರನ್ನುಮ್

   

ಕಲಬುರಗಿ: ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೂಲಕ 2025ರ ಡಿಸೆಂಬರ್ ತಿಂಗಳಲ್ಲಿ ಸ್ವೀಕರಿಸಿದ 39,964 ಅರ್ಜಿಗಳಲ್ಲಿ 38,133 ಅರ್ಜಿಗಳನ್ನು ಕಾಲಮಿತಿಯಲ್ಲಿಯೇ ವಿಲೇವಾರಿ ಮಾಡಿ ಶೇ95.42ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿಲ್ಲೆ ಮತ್ತೆ ನಂ.1 ಸ್ಥಾನ ಪಡೆದಿದೆ.

ನಾಡ ಕಚೇರಿಯಿಂದ ಕಂದಾಯ ಇಲಾಖೆಯ 41 ಸೇವೆ ನೀಡಲು ಡಿಸೆಂಬರ್‌ ತಿಂಗಳಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ 9.31 ವಿಲೇವಾರಿ ಸೂಚ್ಯಂಕದ ಪ್ರಕಾರ ಇತ್ಯರ್ಥ ಮಾಡಿ ಸಾರ್ವಜನಿಕರ ಸೇವೆಯಲ್ಲಿ ರಾಜ್ಯದ ಗಮನ ಸೆಳೆದಿದೆ.

ADVERTISEMENT

ಕಳೆದ‌ 2025ರ ಜುಲೈ ತಿಂಗಳಲ್ಲೂ ಕಲಬುರಗಿ ಜಿಲ್ಲೆ ಅಟಲ್‌ಜೀ ಜನಸ್ನೇಹಿ ಕೇಂದ್ರದಿಂದ ಅರ್ಜಿ ವಿಲೇವಾರಿಯಲ್ಲಿ ಮೊದಲನೇ ಸ್ಥಾನ ಪಡೆದಿತ್ತು. ಇದೀಗ ಮತ್ತೆ ವಿಲೇವಾರಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ವಿಶೇಷ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಸ್ವೀಕೃತ 3,344 ಅರ್ಜಿಗಳಲ್ಲಿ 3,070, ಆಳಂದದಲ್ಲಿ 4,880ರಲ್ಲಿ 4,572, ಚಿಂಚೋಳಿಯಲ್ಲಿ ಸ್ವೀಕೃತ 2,654ರಲ್ಲಿ 2,599, ಚಿತ್ತಾಪುರದಲ್ಲಿ ಸ್ವೀಕೃತ 3,330ರಲ್ಲಿ 3,285, ಜೇವರ್ಗಿಯಲ್ಲಿ ಸ್ವೀಕೃತ 5,081ರಲ್ಲಿ 4,905, ಕಲಬುರಗಿಯಲ್ಲಿ ಸ್ವೀಕೃತ 9,566ರಲ್ಲಿ 8,926, ಕಾಳಗಿಯಲ್ಲಿ ಸ್ವೀಕೃತ 1,950ರಲ್ಲಿ 1,881, ಕಮಲಾಪುರದಲ್ಲಿ ಸ್ವೀಕೃತ 1,782ರಲ್ಲಿ 1,691, ಸೇಡಂನಲ್ಲಿ ಸ್ವೀಕೃತ 3,101ರಲ್ಲಿ 3,051, ಶಹಾಬಾದ್‌ನಲ್ಲಿ ಸ್ವೀಕೃತ 2,043ರಲ್ಲಿ 2,008, ಯಡ್ರಾಮಿಯಲ್ಲಿ ಸ್ವೀಕೃತ 2,233ರಲ್ಲಿ 2,145 ಅರ್ಜಿ ವಿಲೇವಾರಿ ಮಾಡಿದೆ.

ಟಾಪ್ 10ರಲ್ಲಿ ಕಲ್ಯಾಣದ 4‌ ಜಿಲ್ಲೆಗಳು: ರಾಜ್ಯದಾದ್ಯಂತ ಜಿಲ್ಲಾವಾರು ಅರ್ಜಿ ವಿಲೇವಾರಿ ಪಟ್ಟಿಯನ್ನು ಅವಲೋಕಿಸಿದಾಗ ಅಗ್ರ 10ರಲ್ಲಿ ಕಲಬುರಗಿ, ವಿಜಯನಗರ ಜಿಲ್ಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರೆ, ರಾಯಚೂರು ನಾಲ್ಕನೇ ಮತ್ತು ಯಾದಗಿರಿ ಜಿಲ್ಲೆ ಒಂಬತ್ತನೇ ಸ್ಥಾನ ಪಡೆದಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ 4 ಜಿಲ್ಲೆಗಳು ಸಾರ್ವಜನಿಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಂತಾಗಿದೆ.

ಈ ಸಾಧನೆಗೆ ನಾಡ ಕಚೇರಿ ಮತ್ತು ಅಟಲ್‌ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಸಹಕಾರ ಕಾರ್ಯತತ್ಪರತೆ ಕಾರಣ. ಇದಕ್ಕಾಗಿ ಶ್ರಮಿಸಿದ ಎಲ್ಲ ಸಿಬ್ಬಂದಿಗೆ ಅಭಿನಂದನೆ.
–ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.