ADVERTISEMENT

ನಾಗಮೋಹನದಾಸ್ ಆಯೋಗದ ಸಮಾಲೋಚನಾ ಸಭೆ ಆರಂಭ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 6:51 IST
Last Updated 10 ಡಿಸೆಂಬರ್ 2019, 6:51 IST
   

ಕಲಬುರ್ಗಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ಚರ್ಚಿಸಲು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದ ವಿಭಾಗ ಮಟ್ಟದ ಸಮಾಲೋಚನಾ ‌ಸಭೆ ಇಲ್ಲಿನ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ‌ಆರಂಭವಾಗಿದೆ.

ಆಯೋಗದ ಮುಖ್ಯಸ್ಥರಾದ ನ್ಯಾ.ನಾಗಮೋಹನದಾಸ್, ಸಮಿತಿ ಸದಸ್ಯರಾದ ಪ್ರೊ‌.ಟಿ.ಆರ್.ಚಂದ್ರಶೇಖರ, ಬಿ.ರಾಜಶೇಖರಮೂರ್ತಿ, ಎನ್.ಅನಂತ ನಾಯಕ್, ಸಮಾಜ ಕಲ್ಯಾಣ ‌ಇಲಾಖೆ ಜಂಟಿ ನಿರ್ದೇಶಕ ಸತೀಶ್ ಕೆ.ಎಚ್. ಇದ್ದಾರೆ.

ಕಲ್ಯಾಣ ‌ಕರ್ನಾಟಕ‌ ಜಿಲ್ಲೆಗಳಾದ ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರು, ನೌಕರರ ಸಂಘದ ಸದಸ್ಯರು, ದಲಿತ ಸಂಘಟನೆಗಳು ಭಾಗವಹಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.