ADVERTISEMENT

ನವರಾತ್ರಿ ಪ್ರವಚನ ಸಮಾರೋಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 5:30 IST
Last Updated 18 ಅಕ್ಟೋಬರ್ 2021, 5:30 IST
ಆಳಂದ ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ಈಚೆಗೆ ನಡೆದ ದುರ್ಗಾ ಪುರಾಣ ‍ಪ್ರವಚನದ ಸಮಾರೋಪ ಸಮಾರಂಭದಲ್ಲಿ ಗ್ರಾಮಸ್ಥರು ಪಾಲ್ಗೊಂಡರು
ಆಳಂದ ತಾಲ್ಲೂಕಿನ ನಿಂಬಾಳ ಗ್ರಾಮದಲ್ಲಿ ಈಚೆಗೆ ನಡೆದ ದುರ್ಗಾ ಪುರಾಣ ‍ಪ್ರವಚನದ ಸಮಾರೋಪ ಸಮಾರಂಭದಲ್ಲಿ ಗ್ರಾಮಸ್ಥರು ಪಾಲ್ಗೊಂಡರು   

ನಿಂಬಾಳ (ಆಳಂದ ತಾಲ್ಲೂಕು): ‘ಐತಿಹಾಸಿಕ ಮಹತ್ವ ಪಡೆದ ನಿಂಬಾಳ ಗ್ರಾಮದಲ್ಲಿ ಮುಂದಿನ ವರ್ಷದಿಂದ ದಸರಾ ಮಹೋತ್ಸವವನ್ನು ಸಡಗರ ದಿಂದ ಆಚರಿಸಲಾಗುವುದು. ಎರಡು ವರ್ಷಗಳಿಂದ ಕೊರೊನಾ ಕಾರಣ ಸರಳವಾಗಿ ಆಚರಿಸಲಾಗಿದೆ’ ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಭೀಮಾಶಂಕರ ಪಾಟೀಲ ಹೇಳಿದರು.

ನಿಂಬಾಳ ಗ್ರಾಮದಲ್ಲಿ ತುಳಜಾ ಭವಾನಿ ತರುಣ ಸಂಘದಿಂದ ಆಯೋಜಿಸಿದ್ದ ದುರ್ಗಾ ಪುರಾಣ ‍ಪ್ರವಚನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗಡಿ ಭಾಗದ ಊರು ನಿಂಬಾಳವು ಹೈದರಾಬಾದ್‌ ಕರ್ನಾಟಕ ವಿಮೋಚನಾ ಚಳವಳಿಗೆ ದೊಡ್ಡ ಕಾಣಿಕೆ ನೀಡಿದೆ’ ಎಂದರು.

‘ಗ್ರಾಮವು ಪೌರಾಣಿಕವಾಗಿಯೂ ಗುರುತಿಸಿಕೊಂಡಿದೆ. ಈ ಗ್ರಾಮದಲ್ಲಿ ದಸರಾ ಮಹೋತ್ಸವವನ್ನು ಪ್ರತಿ ಬಾರಿಯೂ ವೈಭವದಿಂದ ಆಚರಿಸುತ್ತ ಬರಲಾಗಿದೆ. ಬರುವ ವರ್ಷದಲ್ಲಿ ಆ ವೈಭವ ಮರುಕಳಿಸಲಿದೆ’ ಎಂದರು.‌

ADVERTISEMENT

ಮಾದನಹಿಪ್ಪರಗಿಯ ವಿರಕ್ತಮಠದ ಪೀಠಾಧ್ಯಕ್ಷ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಮುಖಂಡರಾದ ಚಂದ್ರಕಾಂತ ಗದ್ದೆ, ಪರಮೇಶ್ವರ ನಂದೇಣಿ, ಗ್ರಾಮ ಪಂಚಾಯಿತಿ ಸದಸ್ಯ ವಿರೂಪಾಕ್ಷ ಸ್ವಾಮಿ, ಶರಣಪ್ಪ ಕೊಳಕೂರ, ತುಳಜಾ ಭವಾನಿ ಸಂಘದ ಅಧ್ಯಕ್ಷ ಲಕ್ಷ್ಮಣ ಹೊನ್ನಾಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ ತಳಕೇರಿ, ಹಣಮಂತ, ನಾಗರಾಜ ಮೊನಾಗೋಳ, ಗೌರಿಶಂಕರ ಚಲಗೇರಿ, ಶಾಂತಲಿಂಗ ಶೆಟ್ಟಿಕಾರ, ಸಾಗರ ಕೊಳಕೂರ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.