ADVERTISEMENT

ಕಲಬುರಗಿ: ರಾತ್ರಿ ಕರ್ಫ್ಯೂ- ಸ್ತಬ್ಧವಾದ ಜನಜೀವನ

ರಾತ್ರಿ 10 ರಿಂದ ಬೆಳಗಿನ ಜಾವ 5 ರವರೆಗೂ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 5:45 IST
Last Updated 29 ಡಿಸೆಂಬರ್ 2021, 5:45 IST
ಕಲಬುರಗಿಯಲ್ಲಿ ಮಂಗಳವಾರ ಡಿಸಿಪಿ ಅಡ್ಡೂರು ಶ್ರೀನಿವಾಸಲು (ಎಡಬದಿ) ಅವರು ಪೊಲೀಸ್ ಅಧಿಕಾರಿಗಳಿಗೆ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜರುಗಿಸುವ ಬಗ್ಗೆ ಸೂಚನೆ ನೀಡಿದರು
ಕಲಬುರಗಿಯಲ್ಲಿ ಮಂಗಳವಾರ ಡಿಸಿಪಿ ಅಡ್ಡೂರು ಶ್ರೀನಿವಾಸಲು (ಎಡಬದಿ) ಅವರು ಪೊಲೀಸ್ ಅಧಿಕಾರಿಗಳಿಗೆ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜರುಗಿಸುವ ಬಗ್ಗೆ ಸೂಚನೆ ನೀಡಿದರು   

ಕಲಬುರಗಿ: ಕೋವಿಡ್ ರೂಪಾಂತರಿ ವೈರಸ್ ಓಮೈಕ್ರಾನ್ ಹರಡುವ ಭೀತಿಯಿಂದ ರಾಜ್ಯ ಸರ್ಕಾರ ವಿಧಿಸಿದ ರಾತ್ರಿ ಕರ್ಫ್ಯೂ ಅಂಗವಾಗಿ ನಗರದಲ್ಲಿಯೂ ಮಂಗಳವಾರ ರಾತ್ರಿ 10ಕ್ಕೆ ಎಲ್ಲ ಹೋಟೆಲ್, ಪಾನ್ ಶಾಪ್, ಮಾಲ್ ಸೇರಿದಂತೆ ಇತರೆ ವಾಣಿಜ್ಯ ವಹಿವಾಟುಗಳನ್ನು ಬಂದ್ ಮಾಡಲಾಯಿತು.

ಕರ್ಫ್ಯೂ ಮೊದಲ ದಿನವಾಗಿದ್ದರಿಂದ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ತಮ್ಮ ಜೀಪ್‌ಗಳಲ್ಲಿ ಒಟ್ಟಾಗಿ ಗಸ್ತು ತಿರುಗುವ ಮೂಲಕ ಕರ್ಫ್ಯೂ ಬಗ್ಗೆ ತಿಳಿವಳಿಕೆ ನೀಡಿದರು.

ಇದಕ್ಕೂ ಮುನ್ನ ಡಿಸಿಪಿ ಅಡ್ಡೂರು ಶ್ರೀನಿವಾಸಲು ಅವರು ರಾತ್ರಿ ಎಸಿಪಿಗಳಾದ ಅಂಶುಕುಮಾರ್, ದೀಪನ್ ಎಂ.ಎನ್. ಹಾಗೂ ವಿವಿಧ ಠಾಣೆಗಳ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳೊಂದಿಗೆ ಸಭೆ ನಡೆಸಿ ಮುಂಜಾಗೃತೆ ವಹಿಸುವಂತೆ ಸೂಚನೆ ನೀಡಿದರು.

ADVERTISEMENT

ರಾತ್ರಿ ಕರ್ಫ್ಯೂ ಬಗ್ಗೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದಿದ್ದ ಸಾರ್ವಜನಿಕರು 10 ಗಂಟೆಯೊಳಗಾಗಿ ಮನೆ ಸೇರುವ ಧಾವಂತದಲ್ಲಿದ್ದರು.

ಜನವರಿ 7ರವರೆಗೆ ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಊಟಕ್ಕಾಗಿ ಪರದಾಟ: ಕರ್ಫ್ಯೂ ಇದ್ದುದರಿಂದ 10 ಗಂಟೆಗೇ ಎಲ್ಲ ಹೋಟೆಲ್‌ಗಳು, ಚಹಾದ ಅಂಗಡಿಗಳು ಬಂದ್ ಆಗಿದ್ದವು.

ಹೀಗಾಗಿ, ಊಟಕ್ಕಾಗಿ ಹೋಟೆಲ್‌ಗಳನ್ನೇ ಅವಲಂಬಿಸಿದ್ದ ಉದ್ಯೋಗಿಗಳು ಊಟ ಸಿಗದೇ ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.