ADVERTISEMENT

ಕಲಬುರ್ಗಿಯಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬ ವೃದ್ಧ ಬಲಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 9:47 IST
Last Updated 8 ಏಪ್ರಿಲ್ 2020, 9:47 IST
   

ಕಲಬುರ್ಗಿ: ನಗರದ ಸಂತ್ರಾಸವಾಡಿಯ ಜಿಡಿಎ ಬಡಾವಣೆಯ ನಿವಾಸಿಯಾಗಿದ್ದ 67 ವರ್ಷದ ವೃದ್ಧರೊಬ್ಬರುತೀವ್ರ ಉಸಿರಾಟದ ತೊಂದರೆಯಿಂದ ಇಲ್ಲಿನ ಇಎಸ್ಐಸಿ ಆಸ್ಪತ್ರೆಯಲ್ಲಿ ಮಂಗಳವಾರ ತಡ ರಾತ್ರಿ ‌ನಿಧನರಾದರು.

ತೀವ್ರ ಜ್ವರ ಮತ್ತುಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಮೊದಲು ಅವರನ್ನು ನಗರದ ರಿಂಗ್ ರೋಡ್‌ನಲ್ಲಿರುವಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌ಕೊರೊನಾ ಸೋಂಕಿನ ಲಕ್ಷಣಗಳು ‌ಕಂಡು ಬಂದಿದ್ದರಿಂದ ಮಂಗಳವಾರ ಇಎಸ್‌ಐಸಿ ಆಸ್ಪತ್ರೆಗೆ ದಾಖಲಿಸಲಾಯಿತು. ರಾತ್ರಿಅಲ್ಲಿಯೇಕೊನೆಯುಸಿರೆಳೆದಿದ್ದಾರೆ.

ಕೊರೊನಾ ವೈರಸ್ ಸೋಂಕಿನಿಂದಲೇ ವೃದ್ಧ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ‌ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.

ADVERTISEMENT

ಮೆಕ್ಕಾದಿಂದ ಕಲಬುರ್ಗಿಗೆ ‌ವಾಪಸಾಗಿದ್ದ 76 ವರ್ಷದ ವೃದ್ಧರೊಬ್ಬರು ಹೈದರಾಬಾದ್ ನಲ್ಲಿ ಚಿಕಿತ್ಸೆ ಫಲಿಸದೇ ಮಾ 10ರಂದು ನಿಧನರಾಗಿದ್ದರು‌. ನಂತರ ಪ್ರಯೋಗಾಲಯದ ಫಲಿತಾಂಶದಲ್ಲಿ ಅವರಿಗೆ ಕೋವಿಡ್ 19 ಸೋಂಕಿರುವುದು ದೃಢಪಟ್ಟಿತ್ತು

ಈಗ ಮತ್ತೊಬ್ಬ ವ್ಯಕ್ತಿ ನಿಧನರಾಗುವುದರೊಂದಿಗೆ ಕಲಬುರ್ಗಿಯಲ್ಲಿಕೋವಿಡ್ -19ಗೆ ಬಲಿಯಾದವರ ಸಂಖ್ಯೆ ‌ಎರಡಕ್ಕೇರಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.