ADVERTISEMENT

ಕಲಬುರ್ಗಿ: ಮನೆ ಗೋಡೆ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಬರಹ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 7:24 IST
Last Updated 1 ಮಾರ್ಚ್ 2020, 7:24 IST
   

ಕಲಬುರ್ಗಿ: ಇಲ್ಲಿನ ಸಾಥ್ ಗುಂಬಜ್ ಬಳಿ ಕಿಶನ್ ರಾವ್ ಹಾಗರಗುಂಡಗಿ‌ ಎಂಬುವವರ ಮನೆ ಗೋಡೆಮೇಲೆ ದುಷ್ಕರ್ಮಿಗಳು ‘ಪಾಕಿಸ್ತಾನ ಜಿಂದಾಬಾದ್’ ಎಂದು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ‌ನಿಂದಿಸಿ ಬರಹ ಪ್ರಕಟಿಸಿ ಪರಾರಿಯಾಗಿದ್ದಾರೆ.

ಇದನ್ನು ಕಳೆದ ರಾತ್ರಿ ಬರೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ‌ಧಾವಿಸಿದ ಚೌಕ್ ಠಾಣೆ ಪೊಲೀಸರು ಬರಹವನ್ನು ‌ಅಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT