ADVERTISEMENT

ಕೋವಿಡ್-19ನಿಂದಾಗಿ ಪ್ರಯಾಣ ಮುಂದೂಡಿದ ಪ್ರಯಾಣಿಕರು 

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 9:55 IST
Last Updated 16 ಮಾರ್ಚ್ 2020, 9:55 IST
   

ಕಲಬುರ್ಗಿ: ಕೊರೊನಾ ಸೋಂಕು ಹರಡುವಿಕೆಯಿಂದ ಆತಂಕಗೊಂಡಿರುವ ಜನರು ಮುಂದಿನ ಒಂದು ವಾರ ಮತ್ತು ಹದಿನೈದು ದಿನಗಳ ಪ್ರಯಾಣ ಮೊಟಕುಗೊಳಿಸಲು ಮುಂದಾಗಿದ್ದಾರೆ.

ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಟಿಕೆಟ್ ಕಾಯ್ದಿರಿಸುವಿಕೆ ಕೌಂಟರನಲ್ಲಿ ಹೆಚ್ವಿನ ಸಂಖ್ಯೆಯಲ್ಲಿ ಜನರು ಕಂಡು ಬಂದರು. ಬಹುತೇಕ ಮಂದಿ ಕಾಯ್ದಿರಿಸಲಾದ ಟಿಕೆಟ್‌ನ್ನು ರದ್ದುಗೊಳಿಸಿದರು. ಕೆಲವರು 15 ದಿನಗಳ ನಂತರದ ದಿನಾಂಕಕ್ಕೆ ಟಿಕೆಟ್ ನೀಡುವಂತೆ ಕಾಯ್ದಿರುಸುವಿಕೆ ಅರ್ಜಿ ಸಲ್ಲಿಸಿದರು.

'ಬೆಂಗಳೂರಿನಲ್ಲಿ ತುರ್ತಾದ ಕೆಲಸ ಇತ್ತು. ಮಾರ್ಚ್ 21ಕ್ಕೆ ಕುಟುಂಬದ ಸದಸ್ಯರ ಜೊತೆ ನಾನು ಪ್ರಯಾಣಿಸಬೇಕಿತ್ತು. ಆದರೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಬಂದ್ ಆಗಿವೆ. ಅಲ್ಲಿ ಈಗ ಹೋದರೆ ಪ್ರಯೋಜನ ಇಲ್ಲ. ಕೆಲಸವೂ ಆಗುವುದಿಲ್ಲ. ಅದಕ್ಕೆ ಕಾಯ್ದಿರಿಸಿದ ಟಿಕೆಟ್ ರದ್ದುಪಡಿಸಲು ಬಂದಿರುವೆ' ಎಂದು ಕಲಬುರ್ಗಿಯ ನಿವಾಸಿ ಅಬ್ದುಲ್ ಸಾಬ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.