ADVERTISEMENT

ಮೋದಿ ದೇಶಕ್ಕಾಗಿ ಅವಿಶ್ರಾಂತವಾಗಿ ದುಡಿಯುತ್ತಿರುವ ನಾಯಕ: MLA ಅವಿನಾಶ ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:43 IST
Last Updated 15 ಸೆಪ್ಟೆಂಬರ್ 2025, 5:43 IST
<div class="paragraphs"><p>ಚಿಂಚೋಳಿಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿದರು</p></div>

ಚಿಂಚೋಳಿಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿದರು

   

ಚಿಂಚೋಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ದಿನದ 18 ಗಂಟೆಗಳ ನಿರಂತರ ಸೇವೆ ಸಲ್ಲಿಸುತ್ತಾರೆ. ಒಂದು ದಿನವೂ ವಿಶ್ರಾಂತಿ ಪಡಯದೆ ದೇಶಕ್ಕಾಗಿ ದುಡಿಯುತ್ತಿರುವ ನಾಯಕರಾಗಿದ್ದಾರೆ’ ಎಂದು ಶಾಸಕ ಡಾ. ಅವಿನಾಶ ಉಮೇಶ ಜಾಧವ ಹೇಳಿದರು.

ಅವರು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಶನಿವಾರ ನಡೆದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

‘ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುತಂತ್ರ, ಭಾರತ ವಿರೋಧಿ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚಾಣಕ್ಷತನದಿಂದ ಎದುರಿಸಿ ದೇಶವನ್ನು ಮುನ್ನಡೆಸುತ್ತಿದ್ದಾರೆ’ ಎಂದರು

‘ನರೇಂದ್ರ ಮೋದಿ ಅವರ ತಾಯಿಯನ್ನು ಟೀಕಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಸಂಸ್ಕೃತಿಯನ್ನು ತೋರಿಸಿಕೊಟ್ಟಿದೆ. ಇಂಗ್ಲೆಂಡ್, ಫ್ರಾನ್ಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿನ ಘಟನೆಗಳೇ ಆ ದೇಶದ ಸ್ಥಿತಿಗತಿಗೆ ಸಾಕ್ಷಿಯಾಗಿವೆ. ಆದರೆ ಮೋದಿ ಅವರ ಸಮರ್ಥ ನಾಯಕತ್ವದಿಂದಲೇ ಭಾರತ ಜಾಗತಿಕ ಮಟ್ಟದಲ್ಲಿ ಸದೃಢವಾಗಿ ನಿಂತಿದೆ’ ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಶರಣಪ್ಪ ತಳವಾರ, ಆರ್‌ಎಸ್‌ಎಸ್‌ ಮುಖಂಡ ಅಶೋಕ ಪಾಟೀಲ, ನಾಗಪ್ಪ ಕೊಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಂಗಟಿ ಮಾತನಾಡಿದರು.
ಸಹ ಸಂಚಾಲಕ ಬಸವರಾಜ ಮಾಲಿ ಪಾಟೀಲ, ವೀರು ಪಾಟೀಲ ರಾಯಕೋಡ, ಕೆ.ಎಂ.ಬಾರಿ, ಗೋಪಾಲರಾವ್ ಕಟ್ಟಿಮನಿ, ಅಭಿಷೇಕ ಮಲಕಾನೋರ ಮೊದಲಾದವರು ಇದ್ದರು.
ರಾಮರೆಡ್ಡಿ ಪಾಟೀಲ ಸ್ವಾಗತಿಸಿದರು. ಗಿರಿರಾಜ ನಾಟಿಕಾರ ನಿರೂಪಿಸಿದರು. ಶ್ರೀನಿವಾಸ ಚಿಂಚೋಳಿಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ಯುವ ಮೋರ್ಛಾ ಅಧ್ಯಕ್ಷ ಸತೀಶರೆಡ್ಡಿ ತಾಜಲಾಪುರ, ತಾ.ಪಂ. ಮಾಜಿ ಅಧ್ಯಕ್ಷ ರಾಮರಾವ್ ಪಾಟೀಲ, ಬಿಜೆಪಿ ಮಾಜಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ, ಗೌರಿಶಂಕರ ಉಪ್ಪಿನ್, ಶ್ರೀಮಂತ ಕಟ್ಟಿಮನಿ, ಲಕ್ಷ್ಮಿನರಸಿಂಹರೆಡ್ಡಿ, ರಾಜರೆಡ್ಡಿ ತಾಜಲಾಪುರ, ಗುಂಡಪ್ಪ ಅವರಾದಿ ಸೇರಿದಂತೆ ಹಲವರು ಇದ್ದರು.

ಬಿಜೆಪಿ ಕಾರ್ಯಕರ್ತರ ಪಕ್ಷ. ನಾನು ಏನಾದರೂ ತಪ್ಪಿದರೆ ನನಗೆ ಸರಿ ದಾರಿಗೆ ತರುವ ಶಕ್ತಿ ಪಕ್ಷದ ಕಾರ್ಯಕರ್ತರಿಗಿದೆ
ಡಾ ಅವಿನಾಶ ಜಾಧವ ಶಾಸಕರು ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.