ADVERTISEMENT

ಕಲಬುರ್ಗಿ: ಪೊಲೀಸ್ ಇನ್‌ಸ್ಪೆಕ್ಟರ್‌ಗೂ ತಗುಲಿದ ಕೋವಿಡ್-19 ಸೋಂಕು

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 7:49 IST
Last Updated 28 ಜೂನ್ 2020, 7:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ನಗರದ ಕಮಿಷನರೇಟ್ ವ್ಯಾಪ್ತಿಯ ಠಾಣೆಯೊಂದರ ಪೊಲೀಸ್ ಇನ್‍‌ಸ್ಪೆಕ್ಟರ್ ಒಬ್ಬರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.

ಮೂರು ದಿನಗಳ ‌ಹಿಂದಷ್ಟೇ ವಿಶ್ವವಿದ್ಯಾಲಯ ಠಾಣೆ ಕಾನ್‌ಸ್ಟೆಬಲ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ಕೋವಿಡ್-19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಕೊರೊನಾವಾರಿಯರ್‌ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.

ಕೊರೊ‌ನಾ ಕಂಡು ಬಂದ ಸಿಪಿಐ ಅವರಿಗೆ ಕೆಮ್ಮು, ಜ್ವರ, ನೆಗಡಿ ಮೊದಲಾದ‌ ಯಾವುದೇ ಲಕ್ಷಣಗಳು ಇರಲಿಲ್ಲ. ಎಲ್ಲ ಪೊಲೀಸ್ ಸಿಬ್ಬಂದಿಗೆ ಪರೀಕ್ಷೆ ‌ಮಾಡುತ್ತಿರುವುದರಿಂದ ಇವರ ಗಂಟಲು ದ್ರವವನ್ನು ಕಳೆದ 25 ರಂದು ಸಂಗ್ರಹಿಸಲಾಗಿತ್ತು. ವರದಿ ದೃಢಪಟ್ಟ ಬೆನ್ನಲ್ಲಿಯೇ ನಗರದ ಐಸೊಲೇಶನ್ ಕೇಂದ್ರಕ್ಕೆ ಕಳಿಸಿಕೊಡಲಾಯಿತು.

ADVERTISEMENT

ಈಗಾಗಲೇ ಎಲ್ಲ ಸಿಬ್ಬಂದಿ ಮಾದರಿಯನ್ನು ಸಂಗ್ರಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.