ADVERTISEMENT

ವಿದ್ಯುತ್‌ ವ್ಯತ್ಯಯ ಇಂದು

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:18 IST
Last Updated 17 ಜನವರಿ 2021, 1:18 IST

ಕಲಬುರ್ಗಿ: ಜೆಸ್ಕಾಂ ವ್ಯಾಪ್ತಿಯಲ್ಲಿ ಎಚ್.ಟಿ./ ಎಲ್.ಟಿ. ಮಾರ್ಗ ಸ್ಥಳಾಂತರ ಕಾರ್ಯ ಹಾಗೂ ದುಬೈ ಕಾಲೊನಿ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಜ. 17ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ಯ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಐ.ಟಿ.ಪಾರ್ಕ್ ಫೀಡರ್: ಸಂತೋಷ ಕಾಲೊನಿ, ವರ್ಗೀಸ್ ಅಪಾರ್ಟ್‍ಮೆಂಟ್, ಮಾಣಿಕ ಪ್ರಭು ಕಾಲೊನಿ, ಐ.ಟಿ.ಪಾರ್ಕ್, ನಂದ ಗೋಕುಲ, ಜಯತೀರ್ಥ ಕಲ್ಯಾಣ ಮಂಟಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ದುಬೈ ಕಾಲೊನಿ ಫೀಡರ್: ಎಂ.ಜಿ.ಟಿ.ಟಿ, ಆಶ್ರಯ ಕಾಲೊನಿ, ದುಬೈ ಕಾಲೊನಿ, ಶೇಖ ರೋಜಾ, ಜಿಡಿಎ, ಕಸ್ತೂರಿ ನಗರ, ಸ್ವಾರ್ಗೆಟ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ADVERTISEMENT

ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಜೆಸ್ಕಾಂ ಕಾರ್ಯ ಮತ್ತಪ ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.