ADVERTISEMENT

ಸರ್ಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಮರಳಿಸದಿದ್ದರೆ ಕ್ರಿಮಿನಲ್‌ ಕೇಸ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 16:33 IST
Last Updated 1 ಜುಲೈ 2019, 16:33 IST
‘ಪ್ರಜಾವಾಣಿ’ ಕಚೇರಿಯಲ್ಲಿ ಏರ್ಪಡಿಸಿದ್ದ ಫೋನ್‌ ಇನ್‌ನಲ್ಲಿ ಡಾ.ಕಾ.ರಾಮೇಶ್ವರಪ್ಪ ಗ್ರಾಹಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು
‘ಪ್ರಜಾವಾಣಿ’ ಕಚೇರಿಯಲ್ಲಿ ಏರ್ಪಡಿಸಿದ್ದ ಫೋನ್‌ ಇನ್‌ನಲ್ಲಿ ಡಾ.ಕಾ.ರಾಮೇಶ್ವರಪ್ಪ ಗ್ರಾಹಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು   

ಶ್ರವಣಕುಮಾರ ಬಿರಾದಾರ, ಕಲಕುಟಗಾ, ತಾ.ಆಳಂದ

ಪ್ರತಿ ಬಾರಿ ರೇಶನ್‌ ತರಲು ಅಂಗಡಿಗೆ ಹೋಗುವಾಗ ಕುಟುಂಬ ಸದಸ್ಯರೆಲ್ಲರ ಬೆರಳಚ್ಚು ಬೇಕೇ?

‌–ಒಂದು ಬಾರಿ ಮಾತ್ರ ಬಯೊಮೆಟ್ರಿಕ್‌ನಲ್ಲಿ ಬೆರಳಚ್ಚು ನೀಡಬೇಕು. ಆ ಬಳಿಕ ಪಡಿತರ ಚೀಟಿಯಲ್ಲಿ ಹೆಸರು ಇರುವಕುಟುಂಬದ ಯಾರಾದರೂ ಒಬ್ಬರು ಕೊಟ್ಟರೆ ಸಾಕು.

ADVERTISEMENT

* ವಿಲಾಸ ಗೌತಮ್‌ ನಿಡಗುಂದಾ

ಚಿಂಚೋಳಿ ಭಾಗದಲ್ಲಿ ಉಚಿತ ಅಕ್ಕಿ ಕೊಡುವುದಿಲ್ಲ. ಬದಲಾಗಿ ಪ್ರತಿಯೊಬ್ಬರಿಂದಲೂ ಹಣ ವಸೂಲಿ ಮಾಡುತ್ತಾರೆ. ಅಲ್ಲದೇ, ಅಕ್ರಮ ಆಹಾರ ಧಾನ್ಯವನ್ನು ಸಾಗಾಟ ಮಾಡಲಾಗುತ್ತದೆ. ಈ ಬಗ್ಗೆ ನೀವು ಏನು ಕ್ರಮ ಕೈಗೊಳ್ಳುತ್ತೀರಿ?

–ಆದ್ಯತಾ ಕುಟುಂಬಕ್ಕೆ ಸಂಪೂರ್ಣ ಉಚಿತವಾಗಿ ಅಕ್ಕಿಯನ್ನು ಸರ್ಕಾರ ಪೂರೈಸುತ್ತದೆ. ನ್ಯಾಯಬೆಲೆ ಅಂಗಡಿಯವರಿಗೆ ಪ್ರತಿ ಕ್ವಿಂಟಲ್‌ಗೆ ₹ 130 ಕಮಿಷನ್‌ ಪಾವತಿಸುತ್ತದೆ. ಹಾಗಾಗಿ, ಯಾರೂ ಹಣ ಕೊಡುವ ಅಗತ್ಯವಿಲ್ಲ. ಆದರೆ, ಬೇಳೆಗೆ ₹ 38 ದರ ನಿಗದಿ ಮಾಡಿದ್ದು, ಅದಕ್ಕೆ ಹಣ ಕೊಡಬೇಕು. ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದುದನ್ನು ನಾಲ್ಕು ದಿನಗಳ ಹಿಂದೆ ನಾವು ಆಳಂದದಲ್ಲಿ ಜಪ್ತಿ ಮಾಡುತ್ತೇವೆ. ಈ ಬಗ್ಗೆ ಖಚಿತ ಮಾಹಿತಿ ನೀಡಿದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ.

* ಸಯ್ಯದ್‌ ಚೌಧರಿ, ಕಮಲಾಪುರ

ಪಡಿತರ ಚೀಟಿ ಅರ್ಜಿಗಳನ್ನು ಎಲ್ಲೆಲ್ಲಿ ಸಲ್ಲಿಸಬಹುದು? ಬೆರಳಚ್ಚು ಕಡ್ಡಾಯವೇ?

–ಹೊಸದಾಗಿ ಪಡಿತರ ಚೀಟಿ ಪಡೆಯುವವರು ಗ್ರಾಮ ಪಂಚಾಯಿತಿ, ನಾಡಕಚೇರಿ, ತಾಲ್ಲೂಕು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿಗಳಲ್ಲಿ ಅಥವಾ ಆನ್‌ಲೈನ್‌ ಮೂಲಕ ಸಲ್ಲಿಸಬಹುದು. ಬಯೊಮೆಟ್ರಿಕ್‌ ಪಡೆಯಲು ನ್ಯಾಯಬೆಲೆ ಅಂಗಡಿಯವರು ಯಾವುದೇ ಶುಲ್ಕ ವಿಧಿಸುವಂತಿಲ್ಲ. ಹಾಗೇನಾದರೂ ವಿಧಿಸಿದರೆ ಅವರ ಅನುಮತಿಯನ್ನು ರದ್ದು ಮಾಡಲಾಗುವುದು. ಒಂದು ಬಾರಿ ಮಾತ್ರ ಕುಟುಂಬದ ಎಲ್ಲರೂ ತಮ್ಮ ಬೆರಳಚ್ಚು ಕೊಡಬೇಕು. ಆ ಬಳಿಕ ಪ್ರತಿ ತಿಂಗಳೂ ಒಬ್ಬರು ಬಂದು ಪಡಿತರ ಒಯ್ಯಬಹುದು. ಏನಾದರೂ ತಾಂತ್ರಿಕ ದೋಷಗಳಿಂದಾಗಿ ಪಡಿತರ ಚೀಟಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಿರುತ್ತೇವೆ. ಆದರೆ, ರದ್ದು ಮಾಡುವುದಿಲ್ಲ.

* ರೇವಣಸಿದ್ದಪ್ಪ ಪೂಜಾರ, ಗೋಳಾ (ಕೆ)

ನನ್ನದು ಹಳೆ ಪಡಿತರ ಚೀಟಿ ಇದೆ. ಅದನ್ನು ಪಡೆದುಕೊಂಡು ಹೊಸ ಚೀಟಿ ಕೊಡುತ್ತೀರಾ?

–ಚೀಟಿಯ ಸಂಖ್ಯೆ ಹೇಳಿದರೆ ಅದನ್ನು ಹೊಸ ಚೀಟಿಗೆ ಬದಲಾಯಿಸಿಕೊಡುತ್ತೇವೆ. ಆದರೆ, ಮತ್ತೆ ಹೊಸದಾಗಿ ನಿಮ್ಮ ಕುಟುಂಬದ ಸದಸ್ಯರು ಬಂದು ಬೆರಳಚ್ಚು ಹಾಗೂ ಆಧಾರ್‌ ಕಾರ್ಡ್‌ ನೀಡಬೇಕು.

* ರಾಜೇಂದ್ರ ಎನ್‌.ಕೊಲ್ಲೂರ, ನಾಲವಾರ

ಆಹಾರ ಧಾನ್ಯಗಳಲ್ಲಿ ಹುಳು ಕಂಡು ಬರುತ್ತವೆ. ಸ್ವಚ್ಛ ಇರುವುದಿಲ್ಲ? ಇಂತಹ ಧಾನ್ಯಗಳನ್ನು ಪೂರೈಸಿದರೆ ಹೇಗೆ?

–ಸರ್ಕಾರದಿಂದ ಪೂರೈಕೆಯಾಗಿದ್ದ ಅಕ್ಕಿಯ ಗುಣಮಟ್ಟ ಉತ್ಕೃಷ್ಟವಾಗಿರುತ್ತದೆ. ಆ ಅಕ್ಕಿಯನ್ನು ಸ್ಟೀಮ್‌ ಮಾಡಿರುವುದಿಲ್ಲ. ಹೀಗಾಗಿ, ಪೌಷ್ಟಿಕಾಂಶಗಳು ಹಾಗೆಯೇ ಉಳಿದಿರುತ್ತವೆ. ಆದರೂ, ನಿಮ್ಮ ದೂರಿನ ಬಗ್ಗೆ ವಿಚಾರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.