ADVERTISEMENT

ಪಡಿತರ ಚೀಟಿಗೆ ಶೀಘ್ರ ಮಂಜೂರಾತಿ; ಶಾಂತಗೌಡ ಗುಣಕಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 16:42 IST
Last Updated 13 ಸೆಪ್ಟೆಂಬರ್ 2022, 16:42 IST
ಶಾಂತಗೌಡ ಗುಣಕಿ
ಶಾಂತಗೌಡ ಗುಣಕಿ   

ಕಲಬುರಗಿ: ‘ಜಿಲ್ಲೆಯಲ್ಲಿ ಅನುಮೋದನೆಗೆ ಬಾಕಿ ಇರುವ ಎಲ್ಲ ರೀತಿಯಪಡಿತರಚೀಟಿಗಳಿಗೆ ಇಲಾಖೆ ಆಯುಕ್ತರಿಂದ ನಿರ್ದೇಶನ ಬಂದ ತಕ್ಷಣಶೀಘ್ರಮಂಜೂರಾತಿನೀಡಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಜಿಲ್ಲಾ ಉಪನಿರ್ದೇಶಕಶಾಂತಗೌಡಗುಣಕಿತಿಳಿಸಿದರು.

ನಗರದ ‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಜಿಲ್ಲೆಯಲ್ಲಿ 23,773 ಕುಟುಂಬಗಳು ಹೊಸಪಡಿತರಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 20,896 ಅರ್ಜಿದಾರರ ಸ್ಥಳ ಪರಿಶೀಲನೆ ಆಗಿದೆ. ಸರ್ಕಾರದ ಸೂಚನೆ ಬಂದ ಬಳಿಕ ವಿತರಣೆ ಶುರು ಮಾಡಲಿದ್ದೇವೆ’ ಎಂದರು.

ಫೋನ್‌ ಇನ್‌ನಲ್ಲಿ ಕೇಳಲಾದ ಪ್ರಮುಖ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಲಾದ ಉತ್ತರಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ADVERTISEMENT

ಪ್ರಶ್ನೆ: ಚಿಂಚೋಳಿ ತಾಲ್ಲೂಕಿನ ಚೇಂಗಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡಾಗಳ ಜನರು ಐದಾರು ಕಿ.ಮೀ. ದೂರ ಹೋಗಿಪಡಿತರತರಬೇಕಿದೆ

ಶಾಂತಗೌಡಗುಣಕಿ: ನ್ಯಾಯಬೆಲೆ ಅಂಗಡಿಯವರು ತಾಂಡಾಕ್ಕೇ ತೆರಳಿ ಪಡಿತರವನ್ನು ವಿತರಣೆ ಮಾಡುವಂತೆ ಎರಡು ಮೂರು ದಿನಗಳಲ್ಲಿ ವ್ಯವಸ್ಥೆ ಮಾಡುತ್ತೇವೆ

* ಆಳಂದ ತಾಲ್ಲೂಕಿನ ಬಟ್ಟರಗಾ ಗ್ರಾಮದಲ್ಲಿ 1,200ಪಡಿತರಚೀಟಿಗಳಿದ್ದು, ನ್ಯಾಯಬೆಲೆ ಅಂಗಡಿ ಇಲ್ಲ. ಹೊಸ ಅಂಗಡಿಗೆ ಲೈಸೆನ್ಸ್ ಕೊಡಿ.

ಉತ್ತರ: ಯಾವುದೇ ಗ್ರಾಮದಲ್ಲಿ 500ಕ್ಕಿಂತ ಅಧಿಕಪಡಿತರಚೀಟಿಗಳಿದ್ದರೆ ಅಲ್ಲಿ ಒಂದು ನ್ಯಾಯಬೆಲೆ ಅಂಗಡಿ ಕೊಡಬೇಕು ಎಂಬ ನಿಯಮವಿದೆ. ತಕ್ಷಣ ಲೈಸೆನ್ಸ್‌ ಕೊಡಿಸಲು ಅಧಿಸೂಚನೆ ಹೊರಡಿಸುತ್ತೇವೆ.

* ಚಿಂಚೋಳಿ ತಾಲ್ಲೂಕಿನ ಶೇರಿ ಬಡಾ ತಾಂಡಾದಪಡಿತರಹಂಚಿಕೆ ಮಾಡುವ ನ್ಯಾಯಬೆಲೆ ಅಂಗಡಿಯವರು ಕೇವಲ ಎರಡು, ಮೂರು ದಿನ ಮಾತ್ರಪಡಿತರಹಂಚಿಕೆ ಮಾಡುತ್ತಾರೆ. ಯಾಕೆ ಹೀಗೆ?

ಉತ್ತರ: ತಿಂಗಳು ಪೂರ್ತಿಪಡಿತರಹಂಚಿಕೆ ಮಾಡಬೇಕೆಂದು ಇಲಾಖೆ ಸೂಚನೆ ನೀಡಿ ಲೈಸೆನ್ಸ್ ಹಂಚಿಕೆ ಮಾಡಿರುತ್ತದೆ. ಈ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಆ ಅಂಗಡಿ ಮಾಲೀಕರ ವಿರುದ್ಧ ಕ್ರಮಕ್ಕೆ ಸೂಚನೆ ನೀಡುತ್ತೇನೆ.

* ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಎರಡು ದಿನ ಮಾತ್ರಪಡಿತರವಿತರಿಸುತ್ತಾರೆ. ಇದರಿಂದ ಎಲ್ಲರಿಗೂಪಡಿತರಸಿಗುತ್ತಿಲ್ಲ.

ಉತ್ತರ: ಈ ಬಗ್ಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರ ಜೊತೆ ಮಾತನಾಡುವೆ. ಸೆಪ್ಟೆಂಬರ್ ತಿಂಗಳಲ್ಲಿ ಇಂತಹ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ.

* ಆಳಂದದಲ್ಲಿ ಹೊಸಪಡಿತರಚೀಟಿಗಳನ್ನು ಹಂಚಿಕೆ ಮಾಡುತ್ತಿಲ್ಲ. ಏಜೆಂಟರ ಮೂಲಕ ಮಾತ್ರಪಡಿತರಚೀಟಿ ನೀಡಲಾಗುತ್ತಿದೆ. ಹಣಕ್ಕೂ ಬೇಡಿಕೆ ಇಡುತ್ತಾರೆ.

ಉತ್ತರ:ಪಡಿತರಚೀಟಿ ಪಡೆಯಲು ಹಣ ನೀಡಬೇಕಿಲ್ಲ. ಅಂತಹ ನಿರ್ದಿಷ್ಟ ಪ್ರಕರಣಗಳಿದ್ದರೆ ತಾಲ್ಲೂಕಿನ ತಹಶೀಲ್ದಾರ್ ಅಥವಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ನಮ್ಮ ಕಚೇರಿಗೂ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.