ADVERTISEMENT

ಕೇಂದ್ರ, ರಾಜ್ಯದಲ್ಲಿ ರಾಕ್ಷಸ ಸರ್ಕಾರ: ಪ್ರಿಯಾಂಕ್ ಖರ್ಗೆ ಆರೋಪ

ಚಿತ್ತಾಪುರ, ಕಾಳಗಿಯಲ್ಲಿ ವಿವಿಧ ಕಾಮಗಾರಿಗೆ ಪ್ರಿಯಾಂಕ ಖರ್ಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 4:56 IST
Last Updated 3 ಆಗಸ್ಟ್ 2021, 4:56 IST
ಚಿತ್ತಾಪುರದ ಗುಂಡಗುರ್ತಿ ಗ್ರಾಮದಲ್ಲಿ ಸೋಮವಾರ ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು
ಚಿತ್ತಾಪುರದ ಗುಂಡಗುರ್ತಿ ಗ್ರಾಮದಲ್ಲಿ ಸೋಮವಾರ ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು   

ಚಿತ್ತಾಪುರ: ‘ಸಾಮಾಜಿಕ‌ ನ್ಯಾಯದಲ್ಲಿ ನಂಬಿಕೆ ಇರಿಸಿದ ಜನಪ್ರತಿನಿಧಿಯ ಆಯ್ಕೆಯ ಹಕ್ಕನ್ನು ಸಂವಿಧಾನ ನೀಡಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಶಾಸಕ ಪ್ರಿಯಾಂಕ್ ಎಂ. ಖರ್ಗೆ ಹೇಳಿದರು.

ತಾಲ್ಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಕೆಕೆಆರ್‌ಬಿ ಯೋಜನೆಯಡಿ ಅಂಗನವಾಡಿ ಕಟ್ಟಡ ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿಗಳ ಸಂಪರ್ಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಜನಪ್ರತಿನಿಧಿಗಳು ಸಮಾಜದ ಕಡೆಯ ವ್ಯಕ್ತಿಗೂ ಸಾಮಾಜಿಕ‌ ನ್ಯಾಯ ಒದಗಿಸಬೇಕು. ಜಾತಿ ಮತ್ತು ಧರ್ಮಗಳ ನಡುವೆ ಜಗಳ ಹಚ್ಚುವ ರಾಕ್ಷಸ ನಾಯಕನಾಗಬಾರದು. ದುರಂತ ಎಂದರೆ, ಕೇಂದ್ರ ಹಾಗೂ ರಾಜ್ಯದಲ್ಲಿ ರಾಕ್ಷಸ ಪ್ರವೃತ್ತಿಯ ಸರ್ಕಾರಗಳು ಆಡಳಿತ ನಡೆಸುತ್ತಿವೆ‘ ಎಂದು ಆರೋಪಿಸಿದರು.

ADVERTISEMENT

’ಪ್ರವಾಹ ಸಂತ್ರಸ್ತರ ಮತ್ತು ಕೊರೊನಾ ಸೋಂಕಿತರ ನೆರವಿಗೆ ಬಿಜೆಪಿ ನಾಯಕರು ಬರಲಿಲ್ಲ. ನಾನು ನೆರೆ ಪೀಡಿತ ಜನರ ಕಷ್ಟ ಮತ್ತು ಮಳೆಯಿಂದ ಬೆಳೆ ಕಳೆದುಕೊಂಡ ರೈತರ ನೋವುಆಲಿಸಿದ್ದೇನೆ. ಸೋಂಕಿತರಿಗೆ ಕೋವಿಡ್ ಆರೈಕೆ ಕೇಂದ್ರ ತೆರೆದು, ಆಮ್ಲಜನಕ ವ್ಯವಸ್ಥೆ ಮಾಡಿಸಿದ್ದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಕಿಟ್ ನೀಡಿದ್ದೇನೆ‘ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಗ್ರಾ.ಪಂ ಅಧ್ಯಕ್ಷ ಬಸವರಾಜ ಹಾಲಕಾಯಿ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹೇರೂರು, ಜಿ.ಪಂ ಮಾಜಿ ಸದಸ್ಯರಾದ ಶಂಭುಲಿಂಗ ಗುಂಡಗುರ್ತಿ, ರಮೇಶ ಮರಗೋಳ, ತಾ.ಪಂ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಮುಖಂಡರಾದ ಸುನೀಲ್ ದೊಡ್ಡಮನಿ, ಮಲ್ಲಪ್ಪ ಹೊಸಮನಿ, ಮನ್ಸೂರು ಪಟೇಲ, ಪ್ರಕಾಶ ಕಮಕನೂರು, ಶಿವರಾಜ ಪಾಟೀಲ ಕಲಗುರ್ತಿ, ಮಲ್ಲಿ ಕಾರ್ಜುನ ನರಸಗೊಂಡ, ಬಸವರಾಜ‌, ಶರಣು ಡೋಣಗಾಂವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.