
ಪ್ರಿಯಾಂಕ್ ಖರ್ಗೆ
ಕಲಬುರಗಿ: 'ಜನಪರವಾದ ಉದ್ದೇಶಗಳೊಂದಿಗೆ ಪಾದಯಾತ್ರೆಗಳು ನಡೆಸಿದರೆ ಜನರೂ ಒಪ್ಪುತ್ತಾರೆ, ಜನಬೆಂಬಲವೂ ಬೆಂಬಲ ಸಿಗುತ್ತದೆ. ರಾಜಕೀಯ ಉದ್ದೇಶಕ್ಕೆ ಪಾದಯಾತ್ರೆ ಕೈಗೊಂಡರೆ ನಾಲ್ವರು ನಾಯಕರಷ್ಟೇ ಹೆಜ್ಜೆ ಹಾಕಬೇಕಾಗುತ್ತದೆ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
'ಬಳ್ಳಾರಿ ಗಲಾಟೆಗೆ ಸಂಬಂಧಿಸಿದಂತೆ ಬಿಜೆಪಿಯವರ ಪಾದಯಾತ್ರೆ ನಡೆಸಲು ಮುಂದಾಗಿದ್ದಾರಲ್ಲ' ಎಂಬ ಮಾಧ್ಯಮಗಳ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
'ಯಾವುದೇ ಪಾದಯಾತ್ರೆಯನ್ನು ಜನರೂ ಒಪ್ಪಬೇಕಲ್ಲವೇ? ನಾವು ವಿರೋಧ ಪಕ್ಷದಲ್ಲಿದ್ದಾಗ ಪಾದಯಾತ್ರೆ ನಡೆಸಿದ್ದೆವು. ಬಳ್ಳಾರಿ ರಿಪಬ್ಲಿಕ್ ಕಿತ್ತೊಗೆಲು ಪಾದಯಾತ್ರೆ ನಡೆಸಿದಾಗ ಅದನ್ನು ಸಾಧಿಸಿದೆವು. ಕೃಷ್ಣಾ ನದಿ ಕಡೆಗೆ ಪಾದಯಾತ್ರೆ ನಡೆಸಿದ್ದೆವು, ಯುಕೆಪಿ ಯೋಜನೆಗೆ ಸಂಬಂಧಿಸಿದಂತೆ ಕೆಲಸಮಾಡಿ ತೋರಿಸಿದ್ದೆವೆ ಅಲ್ಲವೇ? ಜನ ಪರ ವಿಚಾರ ಇಟ್ಟುಕೊಂಡು ಪಾದಯಾತ್ರೆ ನಡೆಸಿದರಷ್ಟೇ ಜನ ಬೆಂಬಲ ಸಿಗುತ್ತದೆ. ಇಲ್ಲದಿದ್ದರೆ ನಾಲ್ವರು ನಾಯಕರಷ್ಟೇ ಪಾದಯಾತ್ರೆಯಲ್ಲಿ ಹೋಗಬೇಕಾಗುತ್ತದೆ. ಅವರು ಮಾಡುವ ಪಾದಯಾತ್ರೆಯಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತೆ. ಅವರು ಪಾದಯಾತ್ರೆ ಮಾಡಲಿ' ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.