ADVERTISEMENT

ಕಲಬುರ್ಗಿ: ಎಸ್ಸೆಸ್ಸೆಲ್ಸಿ, ಪಿಯು ವಿದ್ಯಾರ್ಥಿಗಳಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 3:47 IST
Last Updated 10 ಆಗಸ್ಟ್ 2021, 3:47 IST

ಕಲಬುರ್ಗಿ: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90 ಹಾಗೂ ಪಿಯು ದ್ವಿತೀಯ ಪರೀಕ್ಷೆಯಲ್ಲಿ ಶೇ 85ರಷ್ಟು ಅಂಕ ಪಡೆದ, ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಉದ್ದೇಶಿಸಲಾಗಿದೆ’ ಎಂದು ಸಮಾಜದ ಯುವ ಘಟಕದ ಅಧ್ಯಕ್ಷ ಸುರೇಶ ಪಾಟೀಲ ನೇದಲಗಿ ತಿಳಿಸಿದರು.

‘ಕಳೆದ ಎರಡು ವರ್ಷಗಳಿಂದ ಪ್ರತಿಭಾ ಪುರಸ್ಕಾರ ನಡೆಸಿಲ್ಲವಾದ್ದರಿಂದ ಈ ಬಾರಿ 2020 ಹಾಗೂ 2021ನೇ ಸಾಲಿನ ಪ್ರತಿಭೆಗಳಿಗೆ ಏಕಕಾಲಕ್ಕೆ ಪುರಸ್ಕರಿಸಲಾಗುತ್ತಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ಕೊರೊನಾ ವಾರಿಯರ್ಸ್‌ಗಳನ್ನೂ ಸನ್ಮಾನಿಸಲಾಗುವುದು. ಶೀಘ್ರದಲ್ಲೇ ದಿನಾಂಕ ಕೂಡ ನಿಗದಿ ಮಾಡಲಾಗುವುದು’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆಸಕ್ತರು ಆ. 25ರೊಳಗೆ ತಮ್ಮ ಅಂಕಪಟ್ಟಿ ಹಾಗೂ ಭಾವಚಿತ್ರ ಸಮೇತ ಹೆಸರು ನೋಂದಾಯಿಸಿಕೊಳ್ಳಬೇಕು. ‘ವಿಶ್ವರಾಧ್ಯ ಪ್ರಿಂಟರ್ಸ್‌, ಬೂಟನಾಳ್‌ ರಸ್ತೆ, ಜೇವರ್ಗಿ’ ಈ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ 9740627990, 9901199561 ಸಂಪರ್ಕಿಸಬಹದು’ ಎಂದರು.

ADVERTISEMENT

ಶರಣಕುಮಾರ ಖಿಲ್ಲಾಡ, ಸುನೀಲ ಸಜ್ಜನ, ವಿಶ್ವನಾಥ ಪಾಟೀಲ, ಮಹಾಂತೇಶ ಹರವಾಳ, ಗೊಲ್ಲಾಳಪ್ಪ ಚಿನ್ನಾ, ಭಗವಂತ್ರಾಯ ಬಿರಾದಾರ, ಶರಣಬಸು ಹತ್ತರಕಿ, ವಿಶ್ವರಾಧ್ಯ ಹಿಪ್ಪರಗಿ, ಸಿದ್ದು ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.