ADVERTISEMENT

ಕಲಬುರ್ಗಿ: ಆಸ್ತಿ ತೆರಿಗೆ ಶೇ 15ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 6:06 IST
Last Updated 2 ಏಪ್ರಿಲ್ 2021, 6:06 IST

ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ಆಸ್ತಿಗಳ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ಶೇ 15ರಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ತೆರಿಗೆಯು 2021ರ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

ವಸತಿ ಉಪಯೋಗಕ್ಕಾಗಿರುವ ಕಟ್ಟಡಗಳು,ವಾಣಿಜ್ಯ ಉಪಯೋಗಕ್ಕಾಗಿರುವ ಕಟ್ಟಡಗಳು, ಖಾಲಿ ನಿವೇಶನಗಳು,ವಸತಿ ಉಪಯೋಗದ ಅಪಾರ್ಟಮೆಂಟ್‌ಗಳು, ವಾಣಿಜ್ಯ ಉಪಯೋಗದ ಅಪಾರ್ಟಮೆಂಟ್‌ಗಳು,ಕೈಗಾರಿಕೆಗೆ ಉಪಯೋಗದ ಕಟ್ಟಡಗಳ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT