ಚಿಂಚೋಳಿ: ‘ತಾಲ್ಲೂಕಿನ ಚತ್ರಸಾಲ ಗ್ರಾಮದ ಕಲಬುರಗಿ ಸಿಮೆಂಟ್ ಕಂಪನಿ ಸರ್ಕಾರದ 80 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದೆ’ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ವಿಭಾಗೀಯ ವಕ್ತಾರ ರಾಜಕುಮಾರ ಪಾಟೀಲ ತೇಲ್ಕೂರ ಆರೋಪಿಸಿದ್ದಾರೆ.
ಚತ್ರಸಾಲ ಗ್ರಾಮದಲ್ಲಿ ಸಂತ್ರಸ್ತರೊಂದಿಗೆ ಸೋಮವಾರ ಸಂಜೆ ಸಭೆ ನಡೆಸಿ ರೈತರ ಸಮಸ್ಯೆ ಆಲಿಸಿ ಡಿ.20ರಂದು ಕಂಪನಿಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
‘ಕಂಪನಿಯು ಸ್ಥಳಿಯರಿಗೆ ಉದ್ಯೋಗಾವಕಾಶ, ಆಸ್ಪತ್ರೆ ನಿಮಾ೯ಣ, ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದಲ್ಲಿ ವಿನಾಯಿತಿ, ಕಾರ್ಮಿಕರ ಯೂನಿಯನ್ ರಚನೆ, ನೌಕರರಿಗೆ ಬೋನಸ್ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಪಿತಾಂಬರಾವ ಗಣಾಪುರ, ಮೊಯಿನ್ ಪಾಷಾ, ನಾಗರಾಜ ಪಾಟೀಲ್, ಈರಣ್ಣ ಸಾಹುಕಾರ ಗರಗಪಳ್ಳಿ, ಮಂಜುನಾಥ ಶಂಕರ, ಜಗದೀಶ್ ಹುಲಿ ಬುರಗಪಳ್ಳಿ, ಚನ್ನಪ್ಪ ಪಾಟೀಲ್, ನರಸರೆಡ್ಡಿ ಪಾಟೀಲ್ ಕಚ೯ಖೇಡ, ಬಸ್ಸಪ್ಪ ಹೆಂಡಿ, ಚನ್ನಬಸಯ್ಯ ಸ್ವಾಮಿ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.