ADVERTISEMENT

ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:51 IST
Last Updated 17 ನವೆಂಬರ್ 2025, 7:51 IST
<div class="paragraphs"><p>ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ</p></div>

ಪ್ರತಿ ಟನ್ ಕಬ್ಬಿಗೆ ₹3,300 ದರ‌ ನಿಗದಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

   

ಕಲಬುರಗಿ: 'ರಾಜ್ಯದಲ್ಲಿ ಘೋಷಿಸಿರುವಂತೆ ಜಿಲ್ಲೆಯಲ್ಲೂ ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘಗಳ‌ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಗುತ್ತಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ‌ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಸರ್ಕಾರ ಹಾಗೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

'ರಾಜ್ಯ ಸರ್ಕಾರ ಕಬ್ಬು ದರ ನಿಗದಿ ವಿಷಯದಲ್ಲಿ ಕಲಬುರಗಿ ರೈತರೊಂದಿಗೆ ಮಲತಾಯಿ‌ ಧೋರಣೆ ತೋರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ‌ಅವರು ಬೆಂಗಳೂರಿನಲ್ಲಿ ಸಭೆ‌ ನಡೆಸಿ ಪ್ರತಿ ಟನ್ ಕಬ್ಬಿಗೆ ₹3300 ದರ ನಿಗದಿ‌ ಮಾಡಿದ ಬಳಿಕವೂ ಜಿಲ್ಲಾಡಳಿತ ‌ಹಾಗೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಆ ದರವನ್ನು ನೀಡಲು ಮೀನಮೇಷ ಎನಿಸುತ್ತಿವೆ' ಎಂದು ಆರೋಪಿಸಿದರು.

'ಜಿಲ್ಲೆಯ ಅಫಜಲಪುರದಲ್ಲಿ ಕಬ್ಬು ಬೆಳೆಗಾರರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದ ವೇಳೆ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಭೇಟಿ‌ ಕೊಟ್ಟಿದ್ದರು. ಪ್ರತಿ ಟನ್ ಕಬ್ಬಿಗೆ ₹3160 ದರ ನೀಡಲು ಕಾರ್ಖಾನೆಗಳು ‌ಒಪ್ಪಿವೆ. ಅಷ್ಟು ದರ ನೀಡದಿದ್ದರೆ ಕಾರ್ಖಾನೆ ಆರಂಭಿಸಲು‌ ಅವಕಾಶ‌ವೇ‌ ಎಂದು ಭರವಸೆ ನೀಡಿದ್ದರಿಂದ ನಾವೆಲ್ಲ ಹೋರಾಟ ಕೈ ಬಿಟ್ಟಿದ್ದೇವೆ. ಇದೀಗ ಆ ದರವನ್ನು ನೋಡಲು ಒಪ್ಪದೇ ₹3 ಸಾವಿರಕ್ಕೂ ಕಡಿಮೆ‌ ದರ ನೀಡಲು ಮುಂದಾಗಿರುವುದು ಖಂಡನೀಯ' ಎಂದು ಅಸಮಾಧಾನ‌ ವ್ಯಕ್ತಪಡಿಸಿದರು.

ಜಿಲ್ಲಾಡಳಿತದೊಂದಿಗೆ ವಾಗ್ವಾದ: ಪ್ರತಿಭಟನೆ ನಿರತರ ಮನವಿ ಸ್ವೀಕರಿಸಲು ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ‌ ಹಾಗೂ ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಅವರೊಂದಿಗೆ ಪ್ರತಿಭಟನಕಾರರು ಕಬ್ಬಿನ ‌ದರ‌ ನಿಗದಿಗೆ‌ ಸಂಬಂಧಿಸಿದಂತೆ ವಾಗ್ವಾದ ನಡೆಸಿದರು.

'ಜಿಲ್ಲಾಡಳಿತವು ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದಿವೆ. ಸರ್ಕಾರ ಹಾಗೂ ಸಕ್ಕರೆ‌ ಕಾರ್ಖಾನೆಗಳ ‌ಅಧಿಕಾರಿಗಳು ಪರಸ್ಪರ ಶಾಮೀಲಾಗಿದ್ದಾರೆ' ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.