ಚಿಂಚೋಳಿ: ‘ಜಿಲ್ಲೆಯ ಶಹಾಬಾದ ತಾಲ್ಲೂಕಿನ ಮುತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿ ಪಟ್ಟಣದಲ್ಲಿ ಕೋಲಿ ಸಮಾಜದವರು ಮಂಗಳವಾರ ಪ್ರತಿಭಟನೆ ನಡೆಸಿದರು.
ಅಖಿಲ ಭಾರತೀಯ ಕೋಲಿ ಸಮಾಜ, ತಾಲ್ಲೂಕು ಕೋಲಿ/ಕಬ್ಬಲಿಗ ಸಮಾಜ ಜಂಟಿಯಾಗಿ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆಯೂ ಪಟ್ಟಣದ ಬಸ್ ಡಿಪೋ ಕ್ರಾಸ್‌ನಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷ ರವಿರಾಜ ಕೊರವಿ, ಹಿರಿಯ ಮುಖಂಡ ಶರಣಪ್ಪ ತಳವಾರ, ಕೆ.ಎಂ.ಬಾರಿ, ಸಮಾಜದ ಮುಖಂಡ ಲಕ್ಷ್ಮಣ ಆವುಂಟಿ, ಅಖಿಲ ಭಾರತೀಯ ಕೋಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಸುರೇಶ ಬಂಟಾ, ಕೋಲಿ ಕಬ್ಬಲಿಗ ಸಮಾಜ ತಾಲ್ಲೂಕು ಅಧ್ಯಕ್ಷ ಅನಿಲಕುಮಾರ ಜಮಾದಾರ ಹೂಡದಳ್ಳಿ, ವಕೀಲೆ ಮಹಾದೇವಿ ಸಾಸರಗಾಂವ್, ಬಿಎಸ್‌ಪಿ ಮುಖಂಡ ಗೌತಮ ಬೊಮ್ಮನಳ್ಳಿ, ಭಾರತ ಮುಕ್ತಿ ಮೋರ್ಚಾದ ಮಾರುತಿ ಗಂಜಗಿರಿ, ಕುರುಬ ಸಮಾಜದ ಅಧ್ಯಕ್ಷ ಹಣಮಂತ ಪೂಜಾರಿ, ಗೋಪಾಲ ಎಂ.ಪಿ, ಶರಣು ನಾಟಿಕಾರ, ಭರತ ಬುಳ್ಳಾ, ಅಣ್ಣಾರಾವ್ ನಾಟಿಕಾರ, ನಾರಾಯಣ ನಾಟಿಕಾರ ಮೊದಲಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ರವಿಕಾಂತ ಹುಸೆಬಾಯಿ, ಮಲ್ಲಿಕಾರ್ಜುನ ಕೋಟಪಳ್ಳಿ, ಶ್ರೀನಿವಾಸ ಘಾಲಿ, ಮಸೂದ್ ಸೌದಾಗರ, ಜಗನ್ನಾಥ ನಾಟಿಕಾರ, ಜನಾರ್ದನ ಕುಂಚಾವರಂ, ಕಾಶಿನಾಥ ನಾಟಿಕಾರ, ಮಹೇಶ ಘಾಲಿ, ಶಂಕರ ಜಡಾಲ್, ಗಿರಿರಾಜ ನಾಟಿಕಾರ, ತುಳಸಿರಾಮ ಮಂತಟ್ಟಿ, ನರಶಿಮ್ಲು ಸವಾರಿ, ನೆಲ್ಲಿ ಮಲ್ಲಿಕಾರ್ಜುನ, ಕುಪೇಂದ್ರ ತಳವಾರ, ರಾಜು ಮಿರಿಯಾಣ, ಶಿವಕುಮಾರ ತಳವಾರ ಮೊದಲಾದವರು ಇದ್ದರು.
ಡಿವೈಎಸ್‌ಪಿ ಸಂಗಮನಾಥ ಹಿರೇಮಠ ಮತ್ತು ಸಬ್ ಇನ್‌ಸ್ಪೆಕ್ಟರ್ ಗಂಗಮ್ಮ ಜಿನಿಕೇರಿ ನೇತೃತ್ವದಲ್ಲಿ ಬಂದೋಬಸ್ತ ಕೈಗೊಳ್ಳಲಾಗಿತ್ತು. ಪ್ರತಿಭಟನೆ ಮುಗಿದು ಒಂದು ತಾಸಿನ ನಂತರ ಸಂಚಾರ ಸುಗಮ ಗೊಂಡಿತ್ತು.
ರಸ್ತೆತಡೆ ಪರದಾಡಿದ ಜನ
ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದಾಗ ರಾಜ್ಯ ಹೆದ್ದಾರಿ 15 ಮತ್ತು ರಾಷ್ಟ್ರೀಯ ಹೆದ್ದಾರಿ 167ಕ್ಕೆ ತೆರಳುವ ರ್ಮಾದಲ್ಲಿ ಸಾರಿಗೆ ಸಂಸ್ಥೆ ಬಸ್ ಖಾಸಗಿ ಲಾರಿ ಜೀಪು ಕಾರುಗಳು ಹಾಗೂ ದ್ವಿಚಕ್ರವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಜನರು ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದವರೆಗೆ ಸುಡು ಬಿಸಿಲಲ್ಲಿ ನಡೆದುಕೊಂಡು ಸಾಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.