ADVERTISEMENT

ನರೇಗಾದಡಿ ಕೆಲಸ ನೀಡಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 5:47 IST
Last Updated 9 ಮಾರ್ಚ್ 2022, 5:47 IST
ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ರೈತ ಸಂಪರ್ಕ ಕೇಂದ್ರ ಮುಂದೆ ಈಚೆಗೆ ಪ್ರತಿಭಟನೆ ನಡೆಸಲಾಯಿತು
ಯಡ್ರಾಮಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ರೈತ ಸಂಪರ್ಕ ಕೇಂದ್ರ ಮುಂದೆ ಈಚೆಗೆ ಪ್ರತಿಭಟನೆ ನಡೆಸಲಾಯಿತು   

ಯಡ್ರಾಮಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಮತ್ತು ರೈತರ ಬೆಳೆ ಪರಿಹಾರ ಒತ್ತಾಯಿಸಿ ಭಾರತ ಕಮುನಿಷ್ಟ ಪಕ್ಷದ ವತಿಯಿಂದ ಈಚೆಗೆ ಪಟ್ಟಣದ ಸರ್ದಾರ ಶರಣಗೌಡ ವೃತ್ತದಿಂದ ಡಾ. ಬಿಆರ್ ಅಂಬೇಡ್ಕರ್ ವೃತ್ತ ಸುತ್ತುವರಿದು ರೈತ ಸಂಪರ್ಕ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಭೀಮರಾಯ ಮುದಬಸಪ್ಪಗೋಳ ಅರಳಗುಂಡಗಿ ಮಾತನಾಡಿ, ದುಡಿಯುವ ಕೂಲಿಕಾರರಿಗೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡಬೇಕು. ರೈತರ ಬೆಳೆ ತೊಗರಿ, ಹತ್ತಿ ಸೇರಿದಂತೆ ಇತರೆ ಬೆಳೆಗಳು ಹೆಚ್ಚಿನ ತೇವಾಂಶದಿಂದ ಹಾಳಾಗಿದ್ದು, ಈಗ ರೈತರ ಸ್ಥಿತಿ ಗಂಭೀರವಾಗಿರುವುದು ತಮ್ಮ ಗಮನಕ್ಕೆ ಇದೆ. ಆದರು ಇಲ್ಲಿಯವರೆಗೆ ಪರಿಹಾರವೂ ಸಿಕ್ಕಿಲ್ಲ ಮತ್ತು ಉದ್ಯೋಗ ಖಾತ್ರಿಯಲ್ಲಿ ಕಾಮಗಾರಿ ಪ್ರಾರಂಭ ಮಾಡಿಲ್ಲ. ಕೂಡಲೇ ಬೆಳೆ ಪರಿಹಾರ ಮತ್ತು ಉದ್ಯೋಗ ಖಾತ್ರಿಯಲ್ಲಿ ಏಂಟು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಒಂದು ವೇಳೆ ಕಾಮಗಾರಿ ಆಂರಭಿಸದೇ ಹೋದರೆ ತಮ್ಮ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದರು.

ಈ ವೇಳೆ ರಾಜು, ಶಿವಾನಂದ, ಅಣ್ಣಾಪ್ಪ, ಯಶುಬಾಯಿ, ಸುವರ್ಣ, ಶರಣಮ್ಮ, ಭೋರಮ್ಮ, ಸೌಭಾಗ್ಯ, ಶಾಂತಬಾಯಿ, ಮಾಹಾದೇವಿ, ಶಾಂತಬಾಯಿ, ಮರಳಪ್ಪ, ಭಾಗಮ್ಮ, ದೇವಕಿ ಸೇರಿದಂತೆ ಸಿಪಿಐ ಕಾರ್ಯಕರ್ತರು, ಅರಳಗುಂಡಗಿ ಗ್ರಾಮಸ್ಥರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.