ADVERTISEMENT

ಕಲಬುರಗಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಪಿಎಸ್‌ಐ ನೃತ್ಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 6:48 IST
Last Updated 25 ಸೆಪ್ಟೆಂಬರ್ 2024, 6:48 IST
<div class="paragraphs"><p>ಡಿ.ಜೆ. ಹಾಡಿಗೆ ನೃತ್ಯ ಮಾಡಿದ&nbsp;ಪಿಎಸ್‌ಐ</p></div>

ಡಿ.ಜೆ. ಹಾಡಿಗೆ ನೃತ್ಯ ಮಾಡಿದ ಪಿಎಸ್‌ಐ

   

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದ ಗಣೇಶ ಮೂರ್ತಿ ಮೆರವಣಿಗೆ ವೇಳೆ ಪಿಎಸ್‌ಐ ಒಬ್ಬರು ಡಿ.ಜೆ. ಹಾಡಿಗೆ ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜೇರಟಗಿಯಲ್ಲಿ ಸೆಪ್ಟೆಂಬರ್ 23ರ ರಾತ್ರಿ ನಡೆದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆಯಲ್ಲಿ ನೇಲೋಗಿ ಪಿಎಸ್‌ಐ ಚಿದಾನಂದ ಸವದಿ ಎಂಬುವವರು ನೃತ್ಯ ಮಾಡಿದ್ದಾರೆ. ಮೆರವಣಿಗೆಯಲ್ಲಿ ಭಜರಂಗಿ ಹಾಡಿಗೆ ಯುವಕರು ಚಿದಾನಂದ ಅವರನ್ನು ಭುಜದ ಮೇಲೆ ಹೊತ್ತು ನೃತ್ಯ ಮಾಡಿದ್ದಾರೆ ಎಂಬ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.

ADVERTISEMENT

ಭದ್ರತೆ ನೀಡಬೇಕಿದ್ದ ಪಿಎಸ್‌ಐ, ಯುವಕರೊಂದಿಗೆ ಸೇರಿ ನೃತ್ಯ ಮಾಡಿದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.