ADVERTISEMENT

ಹೃದಯಾಘಾತ: 32 ವರ್ಷದ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಸಾವು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 16:04 IST
Last Updated 31 ಅಕ್ಟೋಬರ್ 2021, 16:04 IST
ಶ್ರೀಕಾಂತ ಅಷ್ಠಗಿ
ಶ್ರೀಕಾಂತ ಅಷ್ಠಗಿ   

ಕಲಬುರಗಿ: ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿನ ದೃಶ್ಯವನ್ನು ಟಿವಿಯಲ್ಲಿ ಇಡೀ ದಿನ ನೋಡಿದ್ದ ಅವರ ಅಭಿಮಾನಿ, ಸುಂದರ ನಗರದ ನಿವಾಸಿ ಶ್ರೀಕಾಂತ ಅಷ್ಠಗಿ (32) ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಅವರಿಗೆ 11 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.

’ಶುಕ್ರವಾರ ನನ್ನ ಮಗ ಶ್ರೀಕಾಂತ ಟಿವಿಯಲ್ಲಿ ಪುನೀತ್ ಸಾವಿಗೀಡಾದ ಸುದ್ದಿಗಳನ್ನು ನೋಡುತ್ತಿರುವುದನ್ನು ಗಮನಿಸಿ ಚಾನೆಲ್ ಬದಲಿಸಿ ಕ್ರಿಕೆಟ್ ಹಚ್ಚಿದ್ದೆ. ನಾನು ಹೊರಗೆ ಹೋದ ಬಳಿಕ ಮತ್ತೆ ಚಾನೆಲ್ ಬದಲಾಯಿಸಿ, ಸಾವಿನ ದೃಶ್ಯಗಳನ್ನು ನೋಡಿದ್ದ. ಶನಿವಾರ ಬೆಳಿಗ್ಗೆ ಮಗನ ಪತ್ನಿ ಓಡೋಡಿ ಬಂದು ಶ್ರೀಕಾಂತ ಬೆವರುತ್ತಿರುವುದನ್ನು ತಿಳಿಸಿದರು. ತಕ್ಷಣವೇ ಜಯದೇವ ಆಸ್ಪತ್ರೆಗೆ ಕರೆದೊಯ್ದಾದಾಗ, ಹೃದಯಾಘಾತ ಆಗಿದ್ದನ್ನು ಖಚಿತಪಡಿಸಿದ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಆದರೆ, ಅರ್ಧ ಗಂಟೆಯಲ್ಲಿ ಮಗ ಸಾವಿಗೀಡಾದ ಸುದ್ದಿ ಬಂತು‘ ಎಂದು ಶ್ರೀಕಾಂತ ತಂದೆ ಪ್ರಕಾಶ ಅಷ್ಠಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT