
ಚಿಂಚೋಳಿ: ತಾಲ್ಲೂಕಿನಲ್ಲಿ ಹಿಂಗಾರು ಬಿತ್ತನೆ ಬಹುತೇಕ ಪೂರ್ಣಗೊಂಡಿದ್ದು, ಹಿಂಗಾರು ಬೆಳೆಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ.
ಸದ್ಯ ಕಳೆ ತೆಗೆಯುವ ಹಾಗೂ ಎಡೆ ಹೊಡೆಯುವ ಕೆಲಸ ನಡೆಯುತ್ತಿದೆ. ಅತಿಯಾದ ಮಳೆಯಿಂದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿತ್ತು. ಇದರಿಂದ ಹಿಂಗಾರು ಬಿತ್ತನೆ ಅಸ್ತವ್ಯಸ್ಥವಾಗಿದೆ. ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಬಿಳಿ ಜೋಳ 5950 ಹೇಕ್ಟರ್ (7900), ಕಡಲೆ 5300 ಹೇಕ್ಟರ್(7000), ಕುಸುಬೆ 1280 ಹೇಕ್ಟರ್ (1600) ನಷ್ಟು ಬಿತ್ತನೆ ನಡೆಸಲಾಗಿದೆ. ಆವರಣದಲ್ಲಿ ಪ್ರಸಕ್ತ ವರ್ಷದ ನಿಗದಿ ಪಡಿಸಿದ ಬಿತ್ತನೆಯ ಗುರಿ ವಿವರಿಸಲಾಗಿದೆ.
ಸದ್ಯ ಜೋಳ, ಕಡಲೆ ಹಾಗೂ ಕುಸುಬೆ ಬೆಳವಣಿಗೆಯ ಹಂತದಲ್ಲಿದೆ. ಚಳಿ ಹೆಚ್ಚಾಗಿದ್ದರಿಂದ ಕಡಲೆಗೆ ಅನುಕೂಲವಾಗಿದೆ. ಆದರೆ, ಜೋಳದಲ್ಲಿ ಸೈನಿಕ ಹುಳುಗಳ ಬಾಧೆ ಕಂಡು ಬಂದಿದೆ ಎಂದು ರೈತರು ತಿಳಿಸಿದ್ದಾರೆ.
Quote - ಹವಾಮಾನ ವೈಪರಿತ್ಯದಿಂದ ಬೆಳೆ ಹಾನಿಯಿಂದ ರಕ್ಷಣೆ ಪಡೆದುಕೊಳ್ಳಲು ಜೋಳ ಕಡಲೆ ಮತ್ತಿತರ ಬೆಳೆಗಳಿಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಬೇಕು ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕರು ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.