ADVERTISEMENT

ಕಲಬುರ್ಗಿಯಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 8:04 IST
Last Updated 6 ಆಗಸ್ಟ್ 2020, 8:04 IST
ಕಲಬುರ್ಗಿಯಲ್ಲಿ ಬುಧವಾರ ಸುರಿದ ಮಳೆಯಲ್ಲೇ ಆಶಾ ಕಾರ್ಯಕರ್ತೆಯರು ರಸ್ತೆ ದಾಟಿದರು
ಕಲಬುರ್ಗಿಯಲ್ಲಿ ಬುಧವಾರ ಸುರಿದ ಮಳೆಯಲ್ಲೇ ಆಶಾ ಕಾರ್ಯಕರ್ತೆಯರು ರಸ್ತೆ ದಾಟಿದರು   

ಕಲಬುರ್ಗಿ: ನಗರದಲ್ಲಿ ಬುಧವಾರ ಮಧ್ಯಾಹ್ನ ಸುಮಾರು ಒಂದು ತಾಸು ಬಿರುಸಿನ ಮಳೆ ಸುರಿಯಿತು. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.

ಬೆಳಿಗ್ಗೆ ತಂಪನೆಯ ವಾತಾವರಣ ಇತ್ತು. ತುಂತುರು ಮಳೆ ನಿರೀಕ್ಷೆಯಲ್ಲಿದ್ದ ಜನರಿಗೆ ಏಕಾಏಕಿ ಬಿರುಸಿನ ಮಳೆ ಶುರುವಾಗಿದ್ದರಿಂದ ರಸ್ತೆಯಲ್ಲಿ ನೆನೆದುಕೊಂಡೇ ಮನೆ, ಕಚೇರಿ ಸೇರಿದರು.

ಬಸವೇಶ್ವರ ಆಸ್ಪತ್ರೆಯಲ್ಲಿ ಕೋವಿಡ್‌–19 ಪ್ರಯೋಗಾಲಯ ಉದ್ಘಾಟನಾ ಸಮಾರಂಭಕ್ಕೆಂದು ಅಳವಡಿಸಲಾದ ಶಾಮಿಯಾನದಲ್ಲಿ ಮಳೆ ನೀರು ತುಂಬಿಕೊಂಡಿತು. ಆದರೆ, ಅಷ್ಟರಲ್ಲಾಗಲೇ ಕಾರ್ಯಕ್ರಮ ಮುಕ್ತಾಯವಾಗಿತ್ತು. ಸತತ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ನಗರ ತಂಪಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.