ADVERTISEMENT

ಸಂಜೆಯವರೆಗೂ ಸುರಿದ ಶ್ರಾವಣದ ಮಳೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:07 IST
Last Updated 11 ಆಗಸ್ಟ್ 2020, 4:07 IST
ಕಲಬುರ್ಗಿಯಲ್ಲಿ ಸೋಮವಾರ ದಿನವಿಡೀ ಸುರಿದ ಜಿಟಿ ಜಿಟಿ ಮಳೆಯಲ್ಲೇ ಮಹಿಳೆಯರಿಬ್ಬರು ಛತ್ರಿ ಹಿಡಿದು ಸಾಗಿದರು
ಕಲಬುರ್ಗಿಯಲ್ಲಿ ಸೋಮವಾರ ದಿನವಿಡೀ ಸುರಿದ ಜಿಟಿ ಜಿಟಿ ಮಳೆಯಲ್ಲೇ ಮಹಿಳೆಯರಿಬ್ಬರು ಛತ್ರಿ ಹಿಡಿದು ಸಾಗಿದರು   

ಕಲಬುರ್ಗಿ: ಶ್ರಾವಣದ ಸೋಮವಾರ ಬೆಳಿಗ್ಗೆ ಆರಂಭವಾದ ಮಳೆಯು ಸಂಜೆಯವರೆಗೂ ಸುರಿಯಿತು. ಇದರಿಂದಾಗಿ ಇಡೀ ದಿನ ಜನರು ತುಂತುರು ಮಳೆಯ ಸವಿಯನ್ನು ಅನುಭವಿಸುತ್ತಲೇ ಓಡಾಡಿದರು.

ಶ್ರಾವಣದ ಅಂಗವಾಗಿ ಭಕ್ತರು ವಿವಿಧ ಗುಡಿ–ಗುಂಡಾರಗಳಿಗೆ ತೆರಳಿ ಪೂಜೆ ಸಲ್ಲಿಸಿ ಬರುವಾಗಲೇ ಮಳೆಯಲ್ಲಿ ನೆನೆದರು. ಮಲೆನಾಡಿನ ಸತತ ಮಳೆಯನ್ನು ನೆನಪಿಸುವಂತೆ ಕಲಬುರ್ಗಿ ನಗರ ಕಂಡು ಬಂತು. ನಗರದ ಹೊರವಲಯದಲ್ಲಿಯೂ ಉತ್ತಮ ಮಳೆಯಾಗಿದೆ. ಜೇವರ್ಗಿ ಪಟ್ಟಣದಲ್ಲಿ ಒಂದು ಗಂಟೆ ಉತ್ತಮ ಮಳೆ ಸುರಿಯಿತು. ಕಾಳಗಿಯಲ್ಲಿ ಭಾನುವಾರ ಸಂಜೆಯಿಂದಲೇ ಆರಂಭವಾದ ಮಳೆಯು ಸೋಮವಾರ ಸಂಜೆವರೆಗೂ ಮುಂದುವರಿಯಿತು.

ನಗರದಲ್ಲಿ 41.50 ಮಿಲಿಮೀಟರ್‌ ಮಳೆ ಸುರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.