ADVERTISEMENT

‘ಒತ್ತಡ ತಡೆಯಲು ರಾಜಯೋಗ ಉತ್ತಮ’

ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ಕಾರ್ಯಕ್ರಮದಲ್ಲಿ ಕಮಿಷನರ್ ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:24 IST
Last Updated 25 ಜೂನ್ 2021, 4:24 IST
ಕಲಬುರ್ಗಿಯ ಸೇಡಂ ರಸ್ತೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ಮಾತನಾಡಿದರು. ಬಿ.ಕೆ. ವಿಜಯಾ, ಪ್ರೇಮಣ್ಣ ಇದ್ದರು
ಕಲಬುರ್ಗಿಯ ಸೇಡಂ ರಸ್ತೆಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ಮಾತನಾಡಿದರು. ಬಿ.ಕೆ. ವಿಜಯಾ, ಪ್ರೇಮಣ್ಣ ಇದ್ದರು   

ಕಲಬುರ್ಗಿ: ‘ಪೋಲಿಸ್ ಇಲಾಖೆಯವರಿಗೂ ಒತ್ತಡಮಯ ಜೀವನವಿರುತ್ತದೆ. ಅದನ್ನು ತಡೆಯಲು ರಾಜಯೋಗ ಖಂಡಿತವಾಗಿಯು ಸಹಯೋಗ ನೀಡುತ್ತದೆ’ ಎಂದು ಕಲಬುರ್ಗಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ತಿಳಿಸಿದರು.

ಬ್ರಹ್ಮಾಕುಮಾರಿಸ್‌ನ ಪ್ರಥಮ ಮುಖ್ಯಸ್ಥೆಯಾದ ರಾಜಯೋಗಿನಿ ಜಗದಂಬಾ ಸರಸ್ವತಿ ಅವರ 56ನೇ ಪುಣ್ಯ ಸ್ಮೃತಿದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ನಾಲ್ಕಾರು ಕಡೆ ಬ್ರಹ್ಮಾಕುಮಾರಿ ಸಂಸ್ಥೆಯ ಕಾರ್ಯಕಲಾಪಗಳನ್ನು ನೋಡಿದ್ದೇನೆ. ಇವರ ತ್ಯಾಗ ಹಾಗೂ ಸೇವಾ ಮನೋಭಾವನೆ ಶ್ಲಾಘನೀಯ. ಕಲಬುರ್ಗಿಯಲ್ಲಿ ಇಷ್ಟು ದೊಡ್ಡ ಹಾಗೂ ಶಾಂತಿಯುತ ವಾತಾವರಣ ಇರಬಹುದೆಂದು ನನಗೆ ಅನಿಸಿರಲಿಲ್ಲ. ಕಲಬುರ್ಗಿ ಜನತೆಗೆ ಇದೊಂದು ಅಪರೂಪದ ಕೊಡುಗೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ನಗರದ ಕೇಂದ್ರಗಳ ಬ್ರಹ್ಮಾಕುಮಾರ ಕುಮಾರಿಯರಾದ ರಾಜೇಶ್ವರಿ, ನೀಲಕ್ಕ, ಶಕುಂತಲಾ, ತೆಲಂಗಾಣದ ವನಪರ್ತಿಯ ಶೋಭಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಲೀಲಾ ನಿರ್ವಹಣೆ ಮಾಡಿದರು.

ಕಲಬುರ್ಗಿ ವಲಯ ರಾಜಯೋಗ ಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ವಿಜಯಾ ಸನ್ಮಾನಿಸಿ ಸ್ವಾಗತಿಸಿದರು. ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಪ್ರೇಮಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.