ADVERTISEMENT

ವಿವಿಧೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 8:09 IST
Last Updated 2 ನವೆಂಬರ್ 2021, 8:09 IST
ಕಲಬುರಗಿಯ ಚಂದ್ರಕಾಂತ ಪಾಟೀಲ ಸೆಂಟ್ರಲ್ ಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅರುಣಾ ಜೆ.ಸಿ ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು
ಕಲಬುರಗಿಯ ಚಂದ್ರಕಾಂತ ಪಾಟೀಲ ಸೆಂಟ್ರಲ್ ಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅರುಣಾ ಜೆ.ಸಿ ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು   

ಕಲಬುರಗಿ: ನಗರದ ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸೋಮವಾರ ವಿಶಿಷ್ಟವಾಗಿ ಆಚರಿಸಲಾಯಿತು. ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯರು ಅರಿಶಿನ ಸೀರೆ ಉಟ್ಟು ಕಂಗೊಳಿಸಿದರು. ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಅಲಂಕಾರ ಮಾಡಲಾಗಿತ್ತು. ಆವರಣವನ್ನು ತಳಿರು, ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಾಗಿತ್ತು.

ಎಸ್‌ಬಿಆರ್‌ ವಸತಿ ಪಬ್ಲಿಕ್‌ ಶಾಲೆ: ಕಾರ್ಯಕ್ರಮದ ಮುಖ್ಯ ಅತಿಥಿ ಶಾರದಾ ರಾಂಪುರೆ ಹಾಗೂ ಅಧ್ಯಕ್ಷ ಸ್ಥಾನವಹಿಸಿದ್ದ ನಂದಾ ಪಾಟೀಲ ನೇತೃತ್ವದಲ್ಲಿ ರಾಜ್ಯೋತ್ಸವ ಧ್ವಜಾರೋಹಣ, ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಮಾಡಲಾಯಿತು. ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಹಾಗೂ ಕನ್ನಡ ಏಕೀಕರಣಕ್ಕಾಗಿ ಹೋರಾಡಿದ ಕವಿಗಳ ಹಾಗೂ ಮಹನೀಯರ ಕುರಿತು ಮಾತನಾಡಿದರು.

ತಕ್ಷಶಿಲಾ ಸ್ಪರ್ಧಾತ್ಮಕ ಕೇಂದ್ರ: ಸಮಾರಂಭಕ್ಕೆ ಸಾಮಾಜಿಕ ಹೋರಾಟಗಾರ ಹಣಮಂತರಾಯ ಅಟ್ಟೂರ ಚಾಲನೆ ನೀಡಿದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕೊಪ್ಪಳ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ನಾಗರಾಜ ಹೆಬ್ಬಾಳ, ಶರಣರಾಜ ಛಪ್ಪರಬಂದಿ, ಸಾಹಿತಿ ಸಂಗಮೇಶ ನಾಗೂರ ಆಗಮಿಸಿದರು, ತರಬೇತಿ ಕೇಂದ್ರದ ಮುಖ್ಯಸ್ಥ ವಸಂತ ಕುಮಾರ ಡಿ.ಮಂಗಲಗಿ, ನಾಗೇಂದ್ರ ಮಾಡ್ಯಾಳೆ, ಜಗದೀಶ ಮರಪಳ್ಳಿ, ಮಹೇಶ ತೊಮಟೆ, ಬಸವರಾಜ, ಪ್ರದೀಪ, ರಾಜಕುಮಾರ, ವಿಜಯಕುಮಾರ, ವೇದವ್ಯಾಸ, ಚಿತ್ರಕಲಾವಿದ ಚಂದನ ಸಿಂಘೆ, ಗಡ್ಡೆಪ್ಪ, ಶಿವರಾಜ ಸಿಪಾಯಿ, ಅರುಣಕುಮಾರ,ಅನಿತಾ ಅಂಕಲಗಿ, ಮೂವಾಶ್ರೀ ದೋಡ್ಲೆ, ಸಪ್ನಾ ಡೊಲಾರೆ, ಅಬೇದಾ ಬೇಗಂ ಇದ್ದರು.

ADVERTISEMENT

ಕನ್ನಡ ಭೂಮಿ: ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ, ಯುವ ಮುಖಂಡರಾದ ಶರಣು ಇಕ್ಕಳಕಿಮಠ, ಬಸು ಮಾಲಿಪಾಟೀಲ, ರೇವಣಸಿದ್ಧ ಕಾರಬಾರಿ, ಆಕಾಶ ಕಲಮನಿ, ಶರಣು ಹಂಗರಗಿ ಇದ್ದರು.

ಸಮತಾ ಕಾಲೋನಿಯಲ್ಲಿ ರಾಜ್ಯೋತ್ಸವವನ್ನು ಹಿರಿಯರಾದ ಶ್ರೀ ಲಕ್ಷ್ಮಣರಾವ ಬಡಿಗೇರ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು.. ಇದೇ ಸಂಧರ್ಭದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಭೀಮಸೇನ‌ ಕುಲಕರ್ಣಿ, ಗುಂಡೇರಾವ ಕುಲಕರ್ಣಿ, ಪ್ರಸನ್ನ ದೇಶಪಾಂಡೆ, ಕಾಳಪ್ಪ ಸರ್, ಶಿವು ಬಡಿಗೇರ, ಮಹೇಶ ಬಿರಾದರ,ಅನಿಲ ಕುಲಕರ್ಣಿ, ಅರುಣ ಪಾಟೀಲ್, ಪ್ರಲ್ಹಾದ ದೇವರು ಇತರರು ಹಾಜರಿದ್ದರು...

ಕಾಮರಾಜ ನಾಡರ್ ಪ್ರಾಥಮಿಕ ಶಾಲೆ: ನಗರದ ಆರ್ಯ ಈಡಿಗ ಸಮಾಜ ಆವರಣದಲ್ಲಿ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಕಾಮರಾಜ ನಾಡರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ನಾರಾಯಣ ಎಂ. ಜೋಶಿ, ಬಸವರಾಜ ರಾವೂರ ಮಾತನಾಡಿದರು. ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನರಸಯ್ಯ ಕೆ. ಗುತ್ತೇದಾರ, ಮುಖ್ಯೋಪಾಧ್ಯಾಯ ರೇವಣಸಿದ್ದಯ್ಯ ವೈದ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.