ಕಲಬುರಗಿ: ನಗರದ ಶೆಡ್‌ವೊಂದರಲ್ಲಿ ವಾಸವಾಗಿದ್ದ 30 ವರ್ಷದ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದು, ಶನಿವಾರ ಎಫ್ಐಆರ್ ದಾಖಲಾಗಿದೆ.
ನಿರ್ಮಾಣ ಹಂತದ ಕಟ್ಟಡದ ವಾಚ್‌ಮ್ಯಾನ್ ಆಗಿದ್ದ ಸಂತ್ರಸ್ತೆಯ ಗಂಡ, ಮೂವರು ಮಕ್ಕಳೊಂದಿಗೆ ಮಹಿಳೆ ಶೆಡ್‌ನಲ್ಲಿ ವಾಸವಾಗಿದ್ದರು. ಶುಕ್ರವಾರ ಸಂಜೆ ವಾಚ್‌ಮ್ಯಾನ್, ಅಕ್ಕಿ ತರಲು ತನ್ನ ಮಕ್ಕಳೊಂದಿಗೆ ಮಾರ್ಕೆಟ್‌ಗೆ ಹೋಗಿದ್ದರು. ಅದೇ ವೇಳೆ ಕಟ್ಟಡದ ಮುಂದೆ ಚಹಾ ಮಾರುತ್ತಿದ್ದ 60 ವರ್ಷ ಆಸುಪಾಸಿನ ವ್ಯಕ್ತಿ, ಮಹಿಳೆ ಇದ್ದ ಶೆಡ್‌ಗೆ ನುಗ್ಗಿದ್ದಾನೆ. ಆಕೆಯನ್ನು ಎಳೆದಾಡಿ ಅತ್ಯಾಚಾರ ಎಸಗಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.