ADVERTISEMENT

ವಾಡಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:48 IST
Last Updated 27 ಜನವರಿ 2026, 7:48 IST
ವಾಡಿ ಸಮೀಪದ ಹಲಕರ್ಟಿ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು
ವಾಡಿ ಸಮೀಪದ ಹಲಕರ್ಟಿ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು   

ವಾಡಿ: ಪಟ್ಟಣದ ಪುರಸಭೆ, ಪೊಲೀಸ್ ಠಾಣೆ ಸಹಿತ ವಿವಿಧೆಡೆ 77ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.

ಪುರಸಭೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯಧಿಕಾರಿ ಮನೋಜಕುಮಾರ ಗುರಿಕಾರ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಬಳಿಕ ಧ್ವಜರೋಹಣ ನೆರವೇರಿಸಿದರು.

ಕಚೇರಿ ವ್ಯವಸ್ಥಾಪಕರು ಮಲ್ಲಿಕಾರ್ಜುನ ಹಾರಕೊಡ, ಮಲ್ಲಿಕಾರ್ಜುನ ಯಳಸಂಗಿ, ಪ್ರಕಾಶ, ಮನೋಜಕುಮಾರ ಹಿರೋಳ್ಳಿ, ವಿರೂಪಾಕ್ಷಿ, ಈಶ್ವರ ಅಂಬೇಕರ್ ಕೆ., ಪೂಜಾ ಪುಲಾರೆ, ಬಸ್ಸಮ್ಮ ಪಾಟೀಲ, ರೇವಣಸಿದ್ದಪ್ಪ ಶಿರೋಳಕರ, ರೂಪಾ ಕುಲಕರ್ಣಿ, ರೇಣುಕಾ ಪ್ರಧಾನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ADVERTISEMENT

ಪೊಲೀಸ್ ಠಾಣೆ:

ಪಿಎಸ್ಐ ತಿರುಮಲೇಶ ಕೆ. ಧ್ವಜರೋಹಣ ನೆರವೇರಿಸಿದರು. ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ, ಸಿಬ್ಬಂದಿಗಳಾದ ಚಂದ್ರಶೇಖರ, ಲಕ್ಷ್ಮಣ ತಳಕೇರಿ, ಶರಣಪ್ಪ ಜಾಂಜಿ, ಅಮರನಾಥ ಧನ್ನಿ, ಸುನೀಲ, ಸಿದ್ದಾರೆಡ್ಡಿ, ರವಿ, ಬಸಲಿಂಗಪ್ಪ ಮುನಗಲ್, ಎಂ ಡಿ, ಯೂಸುಫ್, ಶಿವಕುಮಾರ ವರಕೇರಿ, ಆನಂದ, ಬಸಲಿಂಗಪ್ಪ ಮಡ್ಡಿ, ದೇವಪ್ಪ ಹಾಗೂ ಇನ್ನಿತರರು ಇದ್ದರು.

ನಾಲವಾರ:

ನಾಲವಾರ ಸಿದ್ದಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಧ್ವಜಾರೋಹಣ ಮಾಡಿದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹಣಮಂತರಾಯ ದಿಗಸಂಗಿ, ಪ್ರೌಢಶಾಲೆ ಮುಖ್ಯಗುರು ಶಿಲ್ಪಾ ಬಿ ಅಣ್ಣಿಗೇರಿ, ಶೈಲಜಾ ಆರ್ ಪಾಟೀಲ, ರವಿ ಪಾಟೀಲ್, ನೀಲಗಂಗಾ, ಮಂಜುಳಾ ರಾಠೋಡ, ಸಾಲೇಹ ತಸ್ಲೀಮ್, ವಿಫುಲ್ ಕಾನಕುರ್ತಿ, ರಾಜೇಶ್ವರಿ, ಸೋನಿ ನಿಡಗುಂದಿ, ಅಂಬಿಕಾ ಹಾಗೂ ಇನ್ನಿತರರು ಇದ್ದರು.

ಹಲಕರ್ಟಿ:

ಹಲಕರ್ಟಿ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಗುರು ಶರಣಕುಮಾರ ದೋಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.

ಸಹ ಶಿಕ್ಷಕರಾದ ಸುಜಾತಾ ಸರಡಗಿ, ಗೋದಾವರಿ ಕಾಂಬಳೆ, ರೇಣುಕಾ ನಾಲವಾರ, ಶರಣಮ್ಮ ಪಾಟೀಲ, ಮಂದಾಕಿನಿ ದೋಶೆಟ್ಟಿ, ಭಾಗ್ಯಶ್ರೀ ಅಲ್ಲಿಪೂರ, ಸಿದ್ದಮ್ಮ ಬುಕ್ಕಾ, ಭಾಗ್ಯದೇವಿ ಚಾವಣಿಕರ, ಅಂಬಿಕಾ ಮೇಲಿನಮನಿ, ಅರುಣಾ ಛತ್ರಿಕಿ ಹಾಗೂ ಇನ್ನಿತರರು ಇದ್ದರು.

ಅಂಬಾಭವಾನಿ ಶಿಕ್ಷಣ ಸಂಸ್ಥೆ:

ವಾಡಿ ಪಟ್ಟಣದ ಅಂಬಾಭವಾನಿ ಶಿಕ್ಷಣ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ನಾಯಕರ ಹಾಗೂ ಸೈನಿಕರ ಪೋಷಾಕಿನಲ್ಲಿ ವಿದ್ಯಾರ್ಥಿಗಳು ಗಮನ ಸೆಳೆದರು. ಮುಖ್ಯಗುರು ಇಂದಿರಾ ಜಿ.ಕೆ ಧ್ವಜರೋಹಣ ನೆರವೇರಿಸಿದರು.

ಸುಲೋಚನಾ ಹೊಸಮನಿ, ಶಾಂತಾ ಎಚ್., ರೂಪಾದೇವಿ ಎ., ಸುಮಂಗಲಾ, ಶೋಭಾ, ಮುಕುಂದ ಹಾಗೂ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.