ADVERTISEMENT

ಅಂಗಡಿ ಕಳುವು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 16:09 IST
Last Updated 16 ಅಕ್ಟೋಬರ್ 2021, 16:09 IST

ಚಿತ್ತಾಪುರ: ಪಟ್ಟಣದ ಬಜಾರ್‌ದಲ್ಲಿನ ಔಷಧಿ ಅಂಗಡಿ ಮತ್ತು ಎರಡು ಕಿರಾಣಿ ಅಂಗಡಿಗಳಲ್ಲಿ ಗುರುವಾರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿ ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದೀಪಕ್ ಶ್ರೀನಿವಾಸ ಸುಗಂಧಿ, ಚಕ್ರ ಅಲಿಯಾಸ್ ಮದನಕುಮಾರ ರಾಜಶೇಖರ ರೆಡ್ಡಿ, ಅಜಯಕುಮಾರ ಅಲಿಯಾಸ್ ಬಂಗಾರಿ ರಾಜಶೇಖರ ರೆಡ್ಡಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಔಷಧಿ ಅಂಗಡಿಯ ಹತ್ತಿರ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಆರೋಪಿಗಳ ಪತ್ತೆ ಮತ್ತು ಕಳ್ಳತನ ಪ್ರಕರಣ ಶೀಘ್ರ ಸುಖಾಂತ್ಯ ಕಾಣಲು ಪೊಲೀಸರಿಗೆ ನೆರವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.