ADVERTISEMENT

‘ಇಂಧನದ ಮೇಲಿನ ಎಲ್ಲಾ ತೆರಿಗೆ ಇಳಿಸಿ’

​ಪ್ರಜಾವಾಣಿ ವಾರ್ತೆ
Published 24 ಮೇ 2022, 15:20 IST
Last Updated 24 ಮೇ 2022, 15:20 IST
ಎಚ್.ವಿ. ದಿವಾಕರ
ಎಚ್.ವಿ. ದಿವಾಕರ   

ಕಲಬುರಗಿ: ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಮೇಲೆ ಸಿಕ್ಕಾಪಟ್ಟೆ ತೆರಿಗೆಗಳನ್ನು ಹೇರಿ, ಇದೀಗ ಕೊಂಚ ಇಳಿಸಿದಂತೆ ಮಾಡಿ ಮುಖ ಮರೆಸಿಕೊಳ್ಳುವ ಯತ್ನ ಮಾಡುತ್ತಿದೆ. ತೈಲದ ಮೇಲಿನ ಎಲ್ಲ ಬಗೆಯ ತೆರಿಗೆ ಹಾಗೂ ಸೆಸ್‌ಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್‌ ಇಂಡಿಯಾ ಕಮ್ಯುನಿಸ್ಟ್ (ಎಸ್‌ಯುಸಿಐ–ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ. ದಿವಾಕರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಎಲ್ಲಾ ತೆರಿಗೆಗಳು ಮತ್ತು ಸೆಸ್ ಹಿಂಪಡೆಯುವುದರ ಜೊತೆಗೆ, ನಿಯಮಿತವಾಗಿ ಏರಿಕೆಯಾಗುತ್ತಿರುವ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯ ವಿರುದ್ಧವೂ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಬೆಳೆಸುವ ಪ್ರಯತ್ನವನ್ನು ಭಾರತ ಸರ್ಕಾರ ಮಾಡಬೇಕು. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಅಸಲಿ ದರದಲ್ಲಿ ದೊರಕಬೇಕು ಎಂದು ಜನರು ಒಗ್ಗಟ್ಟಾಗಿ ಒತ್ತಾಯಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT