ADVERTISEMENT

ಉದ್ಯೋಗ ಖಾತ್ರಿಯಲ್ಲಿ ಗುಲಾಬಿ ಬೇಸಾಯ

ಮಾಸಿಕ ₹15ರಿಂದ ₹20 ಸಾವಿರ ಆದಾಯ

ಜಗನ್ನಾಥ ಡಿ.ಶೇರಿಕಾರ
Published 24 ಆಗಸ್ಟ್ 2020, 20:15 IST
Last Updated 24 ಆಗಸ್ಟ್ 2020, 20:15 IST
ಚಿಂಚೋಳಿ ತಾಲ್ಲೂಕು ಮೊಗದಂಪುರ ಗ್ರಾಮದ ಕೃಷಿಕ ಅಹೆಮದ ಪಟೇಲ್ ತಮ್ಮ ಹೊಲದಲ್ಲಿ ಗುಲಾಬಿ ಹೂವಿನ ಬೇಸಾಯ ಮಾಡುತ್ತಿದ್ದಾರೆ
ಚಿಂಚೋಳಿ ತಾಲ್ಲೂಕು ಮೊಗದಂಪುರ ಗ್ರಾಮದ ಕೃಷಿಕ ಅಹೆಮದ ಪಟೇಲ್ ತಮ್ಮ ಹೊಲದಲ್ಲಿ ಗುಲಾಬಿ ಹೂವಿನ ಬೇಸಾಯ ಮಾಡುತ್ತಿದ್ದಾರೆ   

ಚಿಂಚೋಳಿ: ತಾಲ್ಲೂಕಿನ ಮೊಗದಂಪುರ ಗ್ರಾಮದ ರೈತ ಅಹೆಮದ್ ಪಟೇಲ್ ಅವರು ಪುಷ್ಪಕೃಷಿಯಲ್ಲಿ ತೊಡಗಿದ್ದು ಅವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ.

ಸುಮಾರು ಮೂರು ಎಕರೆಯಲ್ಲಿ ರೈತ ಪಟೇಲ್ ಅವರು ಗುಲಾಬಿ ಹೂವಿನ ಬೇಸಾಯದಲ್ಲಿ ತೊಡಗಿದ್ದಾರೆ. ಇವರಿಗೆ ಉದ್ಯೋಗ ಖಾತ್ರಿ ಅಡಿಯಲ್ಲಿ ₹1 ಲಕ್ಷ ಮೊತ್ತದವರೆಗೆ ತೋಟಗಾರಿಕಾ ಇಲಾಖೆ ನೆರವಾಗಿದೆ.

ಸುಮಾರು ₹2 ಲಕ್ಷ ಖರ್ಚು ಮಾಡಿ ಗುಲಾಬಿ ಹೂ ಕೃಷಿ ನಡೆಸುತ್ತಿರುವ ಅಹೆಮದ್ ಪಟೇಲ್ ಅವುಗಳ ನಿರ್ವಹಣೆಗೆ ಕಳೆದ ಮೂರು ತಿಂಗಳಲ್ಲಿ ₹50 ಸಾವಿರ ಖರ್ಚು ಮಾಡಿದ್ದಾರೆ. ಎರಡು ವಾರಗಳಿಂದ ಆದಾಯ ಪಡೆಯುತ್ತಿರುವ ಅವರು ಎರಡು ದಿನಕ್ಕೊಮ್ಮೆ ಹೂವು ಕೀಳಿ ಸಮೀಪದ ತೆಲಂಗಾಣದ ಜಹೀರಾಬಾದನ ಹೂವು ಮಾರಾಟಗಾರರಿಗೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

‘ಆರಂಭದಲ್ಲಿ ತಿಂಗಳಿಗೆ ₹15ರಿಂದ ₹20 ಸಾವಿರ ಆದಾಯ ಬರುತ್ತಿದೆ. ಇನ್ನೂ ಎರಡು ತಿಂಗಳು ಕಳೆದರೆ ಹೆಚ್ಚು ಆದಾಯ ದೊರೆಯಲಿದೆ’ ಎನ್ನುತ್ತಾರೆ ಅಹೆಮದ್ ಪಟೇಲ್ ಇರಗಪಳ್ಳಿ.

‘ಉದ್ಯೋಗ ಖಾತ್ರಿ ಅಡಿಯಲ್ಲಿ ಅಹೆಮದ್ ಪಟೇಲ್ ಗುಲಾಬಿ ಹೂ ಬೇಸಾಯಕ್ಕೆ ಮುಂದೆ ಬಂದಿರುವ ಏಕೈಕ ವ್ಯಕ್ತಿ. ಮಾರುಕಟ್ಟೆ ಸಮಸ್ಯೆಯಿಲ್ಲ. ಸಮೀಪದಲ್ಲಿ ಜಹೀರಾಬಾದ ಹಾಗೂ ಹೈದರಾಬಾದ್‌ಗೂ ಹೂ ಕಳಿಸಬಹುದಾಗಿದೆ. ಒಮ್ಮೆ ಆದಾಯ ಆರಂಭವಾದರೆ ನಿಲ್ಲುವುದೇ ಇಲ್ಲ. ರೋಗ ರುಜಿನಗಳಿಂದ ನಿರ್ವಹಣೆ ಮಾಡುತ್ತ ಸಾಗಿದರೆ ಸಾಕು ಸುಮಾರು 6ರಿಂದ 8 ವರ್ಷಗಳ ವರೆಗೂ ಹೂವಿನ ಗಿಡಗಳು ಹೂಬಿಡುತ್ತಲೆ ಸಾಗುತ್ತವೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕ ಅಜಿಮುದ್ದಿನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.