ADVERTISEMENT

ಚಿಂಚೋಳಿ: ಚನ್ನಶ್ರೀ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:59 IST
Last Updated 18 ಮಾರ್ಚ್ 2022, 4:59 IST
ಚಿಂಚೋಳಿಯ ಹಾರಕೂಡ ಚನ್ನಬಸವ ಶಿವಯೋಗಿಗಳ 71ನೇ ಜಾತ್ರಾ ಮಹೋತ್ಸವದಲ್ಲಿ ಚನ್ನಶ್ರೀ ಪ್ರಶಸ್ತಿಯನ್ನು ಬಿ.ಕೆ ಹಿರೇಮಠ, ವೀರೇಂದ್ರ ಭಂಟನಳ್ಳಿ, ಶರಣು ಗೋಗಿ ಹಾಗೂ ಶಿವಲಿಂಗ ಶಾಸ್ತ್ರಿ ಗರೂರು ಅವರಿಗೆ ಡಾ. ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿದರು.
ಚಿಂಚೋಳಿಯ ಹಾರಕೂಡ ಚನ್ನಬಸವ ಶಿವಯೋಗಿಗಳ 71ನೇ ಜಾತ್ರಾ ಮಹೋತ್ಸವದಲ್ಲಿ ಚನ್ನಶ್ರೀ ಪ್ರಶಸ್ತಿಯನ್ನು ಬಿ.ಕೆ ಹಿರೇಮಠ, ವೀರೇಂದ್ರ ಭಂಟನಳ್ಳಿ, ಶರಣು ಗೋಗಿ ಹಾಗೂ ಶಿವಲಿಂಗ ಶಾಸ್ತ್ರಿ ಗರೂರು ಅವರಿಗೆ ಡಾ. ಚನ್ನವೀರ ಶಿವಾಚಾರ್ಯರು ಪ್ರದಾನ ಮಾಡಿದರು.   

ಚಿಂಚೋಳಿ: ಹಾರಕೂಡ ಚನ್ನಬಸವ ಶಿವಯೋಗಿಗಳ ಮಠದಿಂದ ಪ್ರತಿ ವರ್ಷ ನೀಡುವ ಚನ್ನಶ್ರೀ ಪ್ರಶಸ್ತಿ ಪ್ರಸಕ್ತ ವರ್ಷ ಬೀದರ್ ಜಿ‌ಲ್ಲಾ ಪಂಚಾಯಿತಿ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಕೆ ಹಿರೇಮಠ ಸೇರಿ ನಾಲ್ವರಿಗೆ ಈಚೆಗೆ ಪ್ರದಾನ ಮಾಡಲಾಯಿತು.

ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಡಾ. ಚನ್ನವೀರ ಶಿವಾಚಾರ್ಯರು ತಲಾ 5 ಗ್ರಾಂ ಚಿನ್ನದ ಉಂಗುರು ನೀಡಿ ಗೌರವಿಸಿದರು. ಶಿವಲಿಂಗ ಶಾಸ್ತ್ರಿ ಗರೂರು, ಕಲಾವಿದರಾದ ವೀರೇಂದ್ರ ಬಂಟನಳ್ಳಿ ಮತ್ತು ಶರಣು ಗೋಗಿ ಅವರಿಗೂ ಚನ್ನಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ಘನಲಿಂಗ ರುದ್ರಮುನಿ ಶಿವಾಚಾರ್ಯರು, ಡಾಕುಳಗಿ ಶ್ರೀಗಳು, ಸಂಸದ ಡಾ. ಉಮೇಶ ಜಾಧವ, ಶಾಸಕ ಡಾ. ಅವಿನಾಶ ಜಾಧವ, ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಡಾ.ವಿಕ್ರಂ ಪಾಟೀಲ, ಸುಭಾಷ ರಾಠೋಡ್, ಸಂಜೀವನ ಯಾಕಾಪುರ , ಸುಭಾಷ ಸೀಳಿನ್, ರಾಜಶೇಖರ ಮಜ್ಜಗಿ, ಸಂತೋಷ ಗಡಂತಿ, ಅಜೀತ ಪಾಟೀಲ, ಶಂಕರಗೌಡ ಅಲ್ಲಾಪುರ, ರೇವಣಸಿದ್ದಪ್ಪ ಮಜ್ಜಗಿ, ಮಲ್ಲಿಕಾರ್ಜುನ ಅಲ್ಲಾಪುರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.