ಕಲಬುರಗಿ: ‘ಬಂಜಾರ ಸಮುದಾಯದ ಕಲ್ಯಾಣಕ್ಕೆ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಬಂಜಾರ ಕುಟುಂಬಗಳ ಬದುಕು ಹಸನಾಗಿಸಲು ಹಲವು ಯೋಜನೆ ಅನುಷ್ಠಾನಕ್ಕೆ ತರಲಾಗಿದೆ’ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.
ತಾಲ್ಲೂಕಿನ ಶ್ರೀನಿವಾಸ ಸರಡಗಿ ಕ್ರಾಸ್‌ನಲ್ಲಿ ಬುಧವಾರ ಸಂತ ಸೇವಾಲಾಲ್ ಮಹಾ
ರಾಜರ ಜಯಂತ್ಯುತ್ಸವ ಸಮಿತಿ ಆಯೋಜಿ
ಸಿದ್ದ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮುದಾಯದವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತತ್ವದಲ್ಲಿ ನಂಬಿಕೆ ಇರಿಸಿ ಮುನ್ನಡೆಯಬೇಕು’ ಎಂದರು.
ಶಾಸಕ ಬಸವರಾಜ ಮತ್ತಿಮಡು ಮಾತ
ನಾಡಿ, ‘ಪ್ರತಿಯೊಬ್ಬರು ಅಕ್ಷರ ಜ್ಞಾನ ಪಡೆದು, ಶಿಕ್ಷಿತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಸೇವಾಲಾಲ್ ಅವರು ತಮ್ಮ ಸಂದೇಶದಲ್ಲಿ ಸಾರಿದ್ದರು. ಅವರ ತತ್ವಾದರ್ಶಗಳು ಇಂದಿಗೂ ಅನುಕರಣೀಯ’ ಎಂದು ಹೇಳಿದರು.
‘ಯಾವುದೇ ಸಾಧು–ಸಂತರನ್ನು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತ
ಗೊಳಿಸಬಾರದು. ನಮ್ಮ ಏಳಿಗೆಗಾಗಿ ತಮ್ಮ ತತ್ವಾದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು’ ಎಂದರು.
‘ಗುರುವಿನ ಸ್ಥಾನ ದೊಡ್ಡದ್ದು. ಗುರುವಿಲ್ಲದೆ ಸಮಾಜವಿಲ್ಲ. ಹೀಗಾಗಿ, ಮಾನವ ಜನ್ಮ ಪವಿತ್ರವಾಗಿದ್ದು, ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ’ ಎಂದು ಹೇಳಿದರು.
ಗೊಬ್ಬರವಾಡಿ ಪೌರದೇವಿ ಶಕ್ತಿಪೀಠದ ಬಳೀರಾಮ ಮಹಾರಾಜರು ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಸೇವಾಲಾಲ್ ಅವರ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ
ಜರುಗಿತು.
ಬೇಡಸೂರ ಸೊನ್ಯಾಲಗಿರಿಯ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಯಲ್ಲಾಲಿಂಗ ಪುಣ್ಯಾಶ್ರಮದ ಜೇಮಸಿಂಗ ಮಹಾರಾಜರು, ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಹುಚ್ಚೇಶ್ವರ ಹಿರೇಮಠದ ವೀರಭದ್ರ ಶಿವಾಚಾರ್ಯ, ಶಕ್ತಿಪೀಠದ ಡಾ.ಅಪ್ಪರಾವ ದೇವಿಮುತ್ಯಾ, ನವಶಕ್ತಿ ಪಣ್ಯಾಶ್ರಮದ ಮುರಾಹರಿ ಮಹಾರಾಜರು, ಸಾಧುನಾಯಕ ತಾಂಡಾದ ಗಣಪತಿ ಮಹಾರಾಜರು, ಹದನೂರಿನ ಶಾಂತಾದೇವಿ, ಮದಿಹಾಳದ ಕಲಾವತಿದೇವಿ, ಮೋಕ ತಾಂಡಾದ ಶಂಕರ ಮಹಾರಾಜರು ಸಾನ್ನಿಧ್ಯ
ವಹಿಸಿದ್ದರು.
ಸಮಿತಿ ಅಧ್ಯಕ್ಷ ಸಂತೋಷ ಆಡೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರೇವುನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಸುಭಾಷ ವಿ. ರಾಠೋಡ, ಅರವಿಂದ ಚವ್ಹಾಣ, ಕಮಲಾಕರ ರಾಠೋಡ, ಸೋಮಶೇಖರ ಗೋನಾಯಕ, ವಿನೋದ ಪಾಟೀಲ, ಬಾಬು ಚೋಕಲಾ ಪವಾರ, ಸುಶೀಲಾಬಾಯಿ ಬಾಬು ರಾಠೋಡ, ನಾರಾಯ ರಾಮು ಪವಾರ್, ವಾಲ್ಮೀಕಿ ರಾಠೋಡ, ಬಾಬುರಾವ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.