ADVERTISEMENT

ಸರ್ವಜ್ಞ ಸ್ಕಾಲರ್‌ಶಿಪ್‌ ಅಡ್ಮಿಶನ್ ಟೆಸ್ಟ್‌ ಡಿ. 28ಕ್ಕೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 5:53 IST
Last Updated 19 ಡಿಸೆಂಬರ್ 2025, 5:53 IST
ಪ್ರೊ. ಚನ್ನಾರಡ್ಡಿ ಪಾಟೀಲ
ಪ್ರೊ. ಚನ್ನಾರಡ್ಡಿ ಪಾಟೀಲ   

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಡಿ.28ರಂದು ಸರ್ವಜ್ಞ ಸ್ಕಾಲರ್‌ಶಿಪ್‌ ಅಡ್ಮಿಶನ್ ಟೆಸ್ಟ್ ನಡೆಯಲಿದೆ.

ಮೆರಿಟ್‌ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಕಾಲೇಜು ಸರ್ವಜ್ಞ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ ನಡೆಸುತ್ತಿದ್ದು, ಇದರಲ್ಲಿ ಮೊದಲ 200 ರ್‍ಯಾಂಕ್‌ ಪಡೆದವರಿಗೆ ಶುಲ್ಕ ರಿಯಾಯಿತಿ ನೀಡಲಾಗುತ್ತದೆ. ಅದರಲ್ಲೂ ಪ್ರತ್ಯೇಕವಾಗಿ 100 ಹುಡುಗರಿಗೆ ಮತ್ತು 100 ಹುಡುಗಿಯರಿಗೆ ಶುಲ್ಕ ರಿಯಾಯಿತಿ ಮತ್ತು ವಸತಿ ಸೌಲಭ್ಯ ನೀಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ತಿಳಿಸಿದ್ದಾರೆ.

ಡಿ.28ಕ್ಕೆ ಬೆಳಿಗ್ಗೆ 9.30ರಿಂದ 10.30ರವರೆಗೆ ಅಥವಾ 10.30ರಿಂದ 11.30ರವರೆಗೆ ಅಥವಾ ಮಧ್ಯಾಹ್ನ 1.30ರಿಂದ 2.30ರವರೆಗೆ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಎಸ್‌ಎಸ್‌ಎಲ್‌ಸಿ/ ಸಿಬಿಎಸ್‌ಇ ವಿದ್ಯಾರ್ಥಿಗಳಿಂದ ಪರೀಕ್ಷೆಗೆ ಆಹ್ವಾನಿಸಲಾಗಿದೆ. ಅಡ್ಮಿಶನ್ ಟೆಸ್ಟ್‌ಗೆ ನೋಂದಾಯಿಸಲು ಮೊ.8660585132 ಅಥವಾ 9663444518 ಸಂಖ್ಯೆಗೆ ಎಸ್‌ಎಂಎಸ್‌ ಅಥವಾ ಕರೆ ಮಾಡಲು ಸೂಚಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.